ಕನ್ನಾರು ದೇವಸ್ಥಾನದ ಮೊಕ್ತೇಸರರಾಗಿ ವೆಂಕಟೇಶ ಮಂಜ

priest
ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕರಾಗಿ ವೆಂಕಟೇಶ ಮಂಜ ಅಧಿಕಾರ ಸ್ವೀಕರಿಸಿದರು
Published on

ಕೊಕ್ಕರ್ಣೆ: ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕರಾಗಿ ವೆಂಕಟೇಶ ಮಂಜ ಅವರಿಗೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣದ ಆದೇಶದಂತೆ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಇತ್ತೀಚೆಗೆ ಅಧಿಕಾರ ಹಸ್ತಾಂತರಿಸಿದ್ದು, ಭಕ್ತರ ಸಮ್ಮುಖದಲ್ಲಿ ಗುರುವಾರ ದೇವಸ್ಥಾನದ ಜವಾಬ್ದಾರಿ ವಹಿಸಿಕೊಂಡರು. ಆನುವಂಶಿಕ ಅರ್ಚಕ ನಾರಾಯಣ ಮಂಜ, ಹಿರಿಯರಾದ ಮಂಜುನಾಥ ಹೆಬ್ಬಾರ್, ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಮಾಜಿ ಉಪಾಧ್ಯಕ್ಷ ಅಶೋಕ ಮಡಿವಾಳ, ಶ್ಯಾಮಪ್ರಸಾದ್ ಭಟ್, ಕೃಷ್ಣ ಮಡಿವಾಳ, ಪ್ರಕಾಶ ಶೆಟ್ಟಿ, ಉಮಾಶಂಕರ ಶೆಟ್ಟಿ, ಮೋಹನಚಂದ್ರ ಹೆಗ್ಡೆ, ನಿವೃತ್ತ ಉಪಪ್ರಾಂಶುಪಾಲ ಬಿ.ಟಿ.ನಾಯ್ಕ, ಭುಜಂಗ ಶೆಟ್ಟಿ, ವಿನೋದಾ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net