ಕಾರು ಡಿಕ್ಕಿಯಾಗಿ ಸಾವು

death
Published on

ಕುಂದಾಪುರ: ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿ ಸೋಮವಾರ ರಸ್ತೆಬದಿ ನಿಂತಿದ್ದಾತನಿಗೆ ಕಾರು ಡಿಕ್ಕಿ ಹೊಡೆದಿದ್ದು, ಗಾಯಾಳು ಮೃತಪಟ್ಟಿದ್ದಾರೆ.

ಗುಲ್ವಾಡಿ ಗ್ರಾಮದ ಶಶಿಧರ (56) ಮೃತಪಟ್ಟವರು. ರಸ್ತೆ ದಾಟಲು ಸಿದ್ದವಾಗಿದ್ದ ಅವರಿಗೆ ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಶಶಿಧರ ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆತರಲಾಗಿದ್ದು, ಆದರೆ ಗಾಯಾಳು ದಾರಿ ಮಧ್ಯೆ ಮೃತಪಟ್ಟಿದ್ದಾರೆೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net