ವಾಯುಮಾಲಿನ್ಯ: ಲಕ್ಷ ದಾಟಿದ ಅಕಾಲಿಕ ಮರಣ

Pollution
Published on
ವಾಯುಮಾಲಿನ್ಯದ ಅಡ್ಡಪರಿಣಾಮದಿಂದಾಗಿ ವಿವಿಧ ನಗರಗಳಲ್ಲಿ ತಪ್ಪಿಸಬಹುದಾಗಿದ್ದ 1,80,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಮುಂಬೈ, ಬೆಂಗಳೂರು, ಕೋಲ್ಕತ, ಹೈದರಾಬಾದ್ ಚೆನ್ನೈ, ಸೂರತ್, ಪುಣೆ, ಅಹಮದಾಬಾದ್​ಗಳಲ್ಲಿ 1,00,000 ಅಕಾಲಿಕ ಮರಣ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬರ್ವಿುಂಗ್ಹಾಮ್ ಮತ್ತು ಯುಸಿಎಲ್ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವಿಚಾರಗಳಿವೆ. ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಉಪಗ್ರಹಗಳ ಮೂಲಕ 2005-2018 ನಡುವೆ ಸಂಗ್ರಹಿಸಿದ ಡೇಟಾ ಕೂಡ ಇದರಲ್ಲಿ ಅಡಕವಾಗಿದೆ.

ದಕ್ಷಿಣ ಏಷ್ಯಾದ ನಗರಗಳು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಚಿತ್ತಗಾಂಗ್, ಢಾಕಾ, ಹೈದರಾಬಾದ್, ಕರಾಚಿ, ಕೋಲ್ಕತ, ಮುಂಬೈ, ಪುಣೆ, ಸೂರತ್.

ಆಗ್ನೇಯ ಏಷ್ಯಾ: ಬ್ಯಾಂಕಾಕ್, ಹನೋಯಿ, ಹೋ ಚಿ ಮಿನ್ಹ್ ಸಿಟಿ, ಜಕಾರ್ತಾ, ಮನಿಲಾ, ಯಾನ್​ಗೋನ್.

ಮಧ್ಯಪ್ರಾಚ್ಯ: ರಿಯಾದ್, ಸನಾ.

ವಾಯುಮಾಲಿನ್ಯಕ್ಕೆ ಕಾರಣ: ಉದಯೋನ್ಮುಖ ಕೈಗಾರಿಕೆಗಳು ಮತ್ತು ಟ್ರಾಫಿಕ್ ದಟ್ಟಣೆ, ತ್ಯಾಜ್ಯ ಸುಡುವಿಕೆ, ಚಾಕೋಲ್, ಫ್ಯುಯೆಲ್ ವುಡ್ ಬಳಕೆ ಇತ್ಯಾದಿ

ಮಾಲಿನ್ಯ ನಗರಗಳು: ಆಫ್ರಿಕಾ- ಅಬಿದ್​ಜಾನ್, ಅಬುಜಾ, ಅದ್ದಿಸ್ ಅಬಾಬ, ಅಂಟನನರಿವೊ, ಬಮಕೊ, ಬ್ಲಂಟೈರ್, ಕೊನಾಕ್ರಿ, ದಾಕರ್, ದರ್ ಸೆ ಸಲಾಂ, ಇಬದಾನ್, ಕದುನಾ, ಕಂಪಲ, ಕನೊ, ಖರತೋಮ್ ಕಿಗಲಿ, ಕಿನ್​ಶಾಸ, ಲಾಗೊಸ್, ಲಿಲೊನ್​ಗ್ವೆ, ಲುವಾಂಡ, ಲುಬುಂಬಶಿ, ಲುಸಕಾ, ಮೊಂಬಸ, ಎನ್​ಡಜಮೆನಾ, ನೈರೋಬಿ, ನಿಯಮೆ, ಔಗಡೌಗೌ

ನಾಲ್ಕು ಪಟ್ಟು ಹೆಚ್ಚಳ: ನಗರ ಪ್ರದೇಶದ ಜನರು ಉಳಿದ ಪ್ರದೇಶಗಳಿಗಿಂತ 1.5 ರಿಂದ 4 ಪಟ್ಟು ಹೆಚ್ಚು ವಾಯುಮಾಲಿನ್ಯಕ್ಕೆ ತೆರೆದುಕೊಂಡಿದ್ದಾರೆ. 46 ನಗರಗಳ ಪೈಕಿ 40 ನಗರಗಳಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಹೆಚ್ಚಿದೆ.

ಭಾರತದಲ್ಲೇ ಹೆಚ್ಚು: ಅಕಾಲಿಕ ಮರಣ ಪ್ರಮಾಣದ ಭಾರತದಲ್ಲೇ ಹೆಚ್ಚು (1,00,000). ಬಾಂಗ್ಲಾದೇಶದಲ್ಲಿ 24,000.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net