ರುಂಡವಿಲ್ಲದ ಶವ ಪತ್ತೆ!; ಕೊಲೆ ಮಾಡಿ ನಾಲೆಗೆ ಎಸೆದಿರುವ ಶಂಕೆ...

Deadbody
Published on

ರಾಯಚೂರು: ಆಗೊಮ್ಮೆ ಈಗೊಮ್ಮೆ ಭಯಂಕರ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವ ಶವಗಳ ಪಟ್ಟಿಗೆ ಇದು ಹೊಸ ಸೇರ್ಪಡೆ. ಏಕೆಂದರೆ ಇಲ್ಲೊಂದು ಶವ ರುಂಡವೇ ಇಲ್ಲದೆ ಪತ್ತೆಯಾಗಿದ್ದು, ಕಾಣಿಸಿಕೊಂಡಿರುವ ಮುಂಡ ಜನರನ್ನು ಒಮ್ಮೆ ಬೆಚ್ಚಿ ಬೀಳಿಸಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿತ್ತಲಗುಡ್ಡದ ಬಳಿ ಈ ರುಂಡವಿಲ್ಲದ ಶವ ಪತ್ತೆಯಾಗಿದ್ದು, ವ್ಯಕ್ತಿಯನ್ನು ಕೊಲೆ ಮಾಡಿರಬಹುದು ಎನ್ನಲಾಗಿದೆ. ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ಬಳಿಕ ರುಂಡ ಬೇರ್ಪಡಿಸಿ ಶವವನ್ನು ನಾರಾಯಣಪುರ ಬಲದಂಡೆ ನಾಲೆಗೆ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರುಂಡ ಇಲ್ಲದಿರುವುದರಿಂದ ಶವದ ಪತ್ತೆ ಸದ್ಯ ಸಾಧ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಗಬ್ಬೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net