More

    ನಟ ದರ್ಶನ್​ ಹುಟ್ಟುಹಬ್ಬಕ್ಕೆ ಫ್ಯಾನ್ಸ್​ ಭರ್ಜರಿ ಪ್ರಿಪರೇಷನ್​​; ಎಲ್ಲೆಡೆ ಕಟ್​ ಔಟ್​​, ಬ್ಯಾನರ್​​ ಫ್ಲೆಕ್ಸ್​​​​ ಹಾಕಲು ರೆಡಿ..!

    ನಟ ದರ್ಶನ್ ಅಭಿಮಾನಿಗಳು ಫೆಬ್ರವರಿ ತಿಂಗಳಿನಲ್ಲಿ ಅಲರ್ಟ್​ ಆಗಿರುತ್ತಾರೆ. ಕಾರಣ ಏನು ಅಂತ ಹೇಳೋದೆ ಬೇಕಿಲ್ಲ ಯಾಕಂದ್ರೆ ದರ್ಶನ್​ ಪ್ರತೀ ವರ್ಷ ಫೆ.16 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾರೆ.

    ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇದೆ. ಫ್ರೆಬ್ರವರಿ 16ಕ್ಕೆ ನಟ ದರ್ಶನ್ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್ ಟ್ರೆಂಡಿಂಗ್‌ನಲ್ಲಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಈಗಾಗಲೇ ಬ್ಯಾನರ್, ಕಟೌಟ್ ಹಾಕೋದಕ್ಕೆ ಶುರು ಮಾಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ತಾವೇ ಕ್ರಿಯೇಟಿವ್ ಆಗಿ ಪೋಸ್ಟರ್‌ಗಳನ್ನು ಡಿಸೈನ್ ಮಾಡಿ ಟ್ರೆಂಡ್ ಮಾಡುತ್ತಿದ್ದು ದರ್ಶನ್ಗೆ ಆಡ್ವಾನ್ಸ್ ಆಗಿ ಹುಟ್ಟುಹಬ್ಬದ ವಿಶ್​ಗಳನ್ನ ಮಾಡುತ್ತಿದ್ದಾರೆ.

    ದರ್ಶನ್ ಜನ್ಮದಿನಕ್ಕೆ ಎರಡು ಬಿಗ್ ಸರ್ಪ್ರೈಸ್ ರೆಡಿಯಾಗಿವೆ. ಒಂದು ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ದಿ ಹೀರೋ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತಿದೆ.

    ಈ ಬಾರಿ ಕೂಡ ದರ್ಶನ್ ಬರ್ತ್‌ಡೇ ಜೋರಾಗಿಯೇ ಆಚರಿಸುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿದ್ದಾರೆ.

    ಒಂದೆಡೆ ದರ್ಶನ್​ ಹುಟ್ಟುಹಬ್ಬದ ಖುಷಿ ಆದ್ರೆ, ಮತ್ತೊಂದೆಡೆ ಕೆಡಿ ಡೈರೆಕ್ಟರ್ ಜೋಗಿ ಪ್ರೇಮ್ ಸಾರಥ್ಯದಲ್ಲಿ ದರ್ಶನ್ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾದ ಟೈಟಲ್ ಕೂಡ ದರ್ಶನ್​ ಹುಟ್ಟು ಹಬ್ಬದ ದಿನದಂದೇ ರಿವೀಲ್​ ಮಾಡಲಅಗುತ್ತೆ ಎಂದು ಹೇಳಲಾಗುತ್ತಿದೆ.

    ಸದ್ಯ ಈ ಬಾರಿಯೂ ದರ್ಶನ್​ ಹುಟ್ಟುಹಬ್ಬ ಜೋರಾಗಿಯೇ ಆಚರಿಸಲಾಗುತ್ತೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts