

ಕರಾಚಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎರಡನೇ ಮದುವೆ ಆಗಿದ್ದಾನೆ ಎಂಬ ಸ್ಫೋಟಕ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ ಬಹಿರಂಗ ಪಡಿಸಿದೆ. ವಿಚಾರಣೆಯ ವೇಳೆ ದಾವೂದ್ ಸೋದರಳಿಯ ಮಾಹಿತಿ ಖಚಿತಪಡಿಸಿದ್ದಾನೆ ಎಂದು ವರದಿಯಾಗಿದೆ. ಎನ್ಐಎ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸವಿದ್ದಾನೆ. ಜತೆಗೆ ಎರಡನೇ ವಿವಾಹವಾದರೂ ಮೊದಲ ಪತ್ನಿ ಮೆಹಜಬೀನ್ ಶೇಖ್‌ಗೆ ವಿಚ್ಛೇದನ ನೀಡಲ್ಲ ಎಂಬುದು ಬಹಿರಂಗವಾಗಿದೆ.
ಕಳೆದ ಜುಲೈ ತಿಂಗಳಿನಲ್ಲಿ ದಾವೂದ್ನ ಮೊದಲ ಪತ್ನಿಯನ್ನು ಸೋದರಳಿಯ ಅಲಿ ಶಾ ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈ ವೇಳೆ ದಾವೂದ್ ಎರಡನೇ ವಿವಾಹವಾಗಿರುವ ವಿಚಾರವನ್ನು ಮೆಹಜಬೀನ್ ಶೇಖ್ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ಇತ್ತೀಚೆಗೆ ಮುಂಬೈ ಸೇರಿದಂತೆ ಸೇರಿದ ಹಲವೆಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ, ಹಲವರನ್ನು ಬಂಧಿಸಿ ದಾವೂದ್ ಇಬ್ರಾಹಿಂನ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸಿತ್ತು. ನಂತರ ಎನ್ಐಎ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.
ದಾವೂದ್ ಸೋದರಳಿಯ ಎನ್ಐಎಗೆ ತಿಳಿಸಿರುವ ಮಾಹಿತಿ ಪ್ರಕಾರ, ಭಾರತದಲ್ಲಿರುವ ದಾವೂದ್ ಸಂಬಂಧಿಕರೊಂದಿಗೆ ಮೊದಲ ಪತ್ನಿ ವಾಟ್ಸಾಪ್ ಕರೆಗಳ ಮೂಲಕ ಸಂಪರ್ಕ ಸಾಧಿಸುತ್ತಾಳೆ ಎಂದಿದ್ದಾನೆ. ಆದರೆ ದಾವೂದ್ನ ಎರಡನೇ ಹೆಂಡತಿ ಯಾರು? ಎಲ್ಲಿ ವಾಸಿಸುತ್ತಿದ್ದಾಳೆ ಮತ್ತು ದಾವೂದ್‌ನೊಂದಿಗೆ ಯಾವಾಗ ಮದುವೆಯಾಗಿದ್ದಾಳೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. (ಏಜೆನ್ಸೀಸ್)