ಕಿವೀಸ್​ ಎದುರು ಸರಣಿ ಗೆದ್ದು ವಿಶ್ವಕಪ್​ಗೆ ಸಜ್ಜಾದ ಹಾಲಿ ಚಾಂಪಿಯನ್​ ಇಂಗ್ಲೆಂಡ್​

eng vs nz web
Published on

ಲಂಡನ್​: ಆರಂಭಿಕ ಡೇವಿಡ್​ ಮಲಾನ್​ (127 ರನ್​, 114 ಎಸೆತ, 14 ಬೌಂಡರಿ, 3 ಸಿಕ್ಸರ್​) ಭರ್ಜರಿ ಶತಕದ ಬಲದಿಂದ ಇಂಗ್ಲೆಂಡ್​ ತಂಡ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧದ 4ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 100 ರನ್​ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯನ್ನು 3&1ರಿಂದ ವಶಪಡಿಸಿಕೊಂಡ ಹಾಲಿ ವಿಶ್ವ ಚಾಂಪಿಯನ್​ ಇಂಗ್ಲೆಂಡ್​, ವಿಶ್ವಕಪ್​ಗೆ ಭರ್ಜರಿ ಸಿದ್ಧತೆ ನಡೆಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ 9 ವಿಕೆಟ್​ಗೆ 311 ರನ್​ ಪೇರಿಸಿದರೆ, ಕಿವೀಸ್​ 38.2 ಓವರ್​ಗಳಲ್ಲಿ 211 ರನ್​ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್​: 9 ವಿಕೆಟ್​ಗೆ 311 (ಮಲಾನ್​ 127, ಬೇರ್​ಸ್ಟೋ 13, ರೂಟ್​ 29, ಬಟ್ಲರ್​ 36, ಲಿವಿಂಗ್​ಸ್ಟೋನ್​ 28, ಕರನ್​ 20, ರಚಿನ್​ 60ಕ್ಕೆ 4, ಮಿಚೆಲ್​ 40ಕ್ಕೆ 2, ಹೆನ್ರಿ 69ಕ್ಕೆ 2), ನ್ಯೂಜಿಲೆಂಡ್​: 38.2 ಓವರ್​ಗಳಲ್ಲಿ 211 (ನಿಕೋಲ್ಸ್​ 41, ರಚಿನ್​ 61, ಮೊಯಿನ್​ ಅಲಿ 50ಕ್ಕೆ 4, ಕರನ್​ 21ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಡೇವಿಡ್​ ಮಲಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net