More

    VIDEO: ಬಾಹುಬಲಿಯಾದ ಡೇವಿಡ್ ವಾರ್ನರ್….!

    ಬೆಂಗಳೂರು: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೂ ಟಿಕ್‌ಟಾಕ್‌ಗೂ ಅವಿನಾಭಾವ ಸಂಬಂಧ. ಅದರಲ್ಲೂ ಲಾಕ್‌ಡೌನ್ ಆದ ಬಳಿಕವಂತೂ ವಾರ್ನರ್ ಅವರ ದೈನಂದಿನ ಕೆಲಸವೇ ಟಿಕ್‌ಟಾಕ್ ಮಾಡುವುದು! ಈಗಾಗಲೇ ತೆಲುಗು ಚಿತ್ರದ ಹಾಡುಗಳಿಗೆ, ಡೈಲಾಗ್‌ಗಳಿಗೆ ಧ್ವನಿಗೂಡಿಸಿರುವ ವಾರ್ನರ್, ಟಾಲಿವುಡ್‌ನ ಸ್ಟಾರ್ ನಟ ಪ್ರಭಾಸ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ಬಾಹುಬಲಿ’ಯ ವೇಷ ಧರಿಸಿ ಟಿಕ್‌ಟಾಕ್ ಮಾಡಿ ಗಮನಸೆಳೆದಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರ ಬದಲಿಗೆ ಸೆಕ್ಸ್ ಡಾಲ್! ಕೊರಿಯಾ ಫುಟ್‌ಬಾಲ್ ಸ್ಟೇಡಿಯಂನಲ್ಲಿ ವಿವಾದ

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕನಾಗಿರುವ ಡೇವಿಡ್ ವಾರ್ನರ್, ಹಿಂದಿನ ವರ್ಷಗಳಲ್ಲಿ ಇದೇ ವೇಳೆ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ಜನರನ್ನು ರಂಜಿಸುತ್ತಿದ್ದರು. ಕೋವಿಡ್-19ರಿಂದಾಗಿ ಈ ವರ್ಷ ಅಂಥ ಸದಾವಕಾಶ ಕಳೆದುಕೊಂಡಿರುವ ವಾರ್ನರ್, ಟಿಕ್‌ಟಾಕ್ ಮೂಲಕವೇ ತೆಲುಗು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್ ಅಭಿನಯದ ವೈಕುಂಠಪುರಂಲೂ ಚಿತ್ರದ ‘ಬುಟ್ಟಾ ಬೊಮ್ಮಾ..’ ಹಾಡಿನ ನೃತ್ಯ ಮತ್ತು ಮಹೇಶ್ ಬಾಬು ಚಿತ್ರದ ಡೈಲಾಂಗ್‌ವೊಂದು ಭಾರೀ ವೈರಲ್ ಆಗಿತ್ತು. ಇದೀಗ ಬಾಹುಬಲಿ ವೇಷವೂ ಅಷ್ಟೇ ಪ್ರಸಿದ್ಧಿ ಪಡೆದಿದೆ.

    ಐಪಿಎಲ್‌ನ ಆರೆಂಜ್ ಆರ್ಮಿ ತಂಡದ ಇಡೀ ಆಟಗಾರರು ‘ಜೈ ಆರೆಂಜ್ ಆರ್ಮಿ’ ಹೆಸರಿನಲ್ಲಿ ಮಾಡಿರುವ ವಿಡಿಯೋವನ್ನು ತಂಡದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲೂ ವಾರ್ನರ್ ಸಾಕಷ್ಟು ಮಿಂಚಿದ್ದರು. ಪ್ರತಿ ತೆಲುಗು ಟಿಕ್‌ಟಾಕ್‌ನಲ್ಲೂ ವಾರ್ನರ್ ಸನ್‌ರೈಸರ್ಸ್‌ ತಂಡದ ಜೆರ್ಸಿ ಧರಿಸುವುದು ವಿಶೇಷ. ವಾರ್ನರ್‌ಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಸಾಥ್ ನೀಡುತ್ತಿದ್ದಾರೆ. ಕೇವಲ ಫಿಟ್ನೆಸ್, ಕ್ರಿಕೆಟ್ ಅಂಥ ಮುಳುಗದೇ ಮನರಂಜನಾತ್ಮಕವಾಗಿ ಅಭಿಮಾನಿಗಳನ್ನು ರಂಜಿಸಲು ವಾರ್ನರ್ ಯಶಸ್ವಿಯಾಗಿದ್ದಾರೆ.

    VIDEO: ಬಾಹುಬಲಿಯಾದ ಡೇವಿಡ್ ವಾರ್ನರ್....!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts