More

    ಪ್ರೇಕ್ಷಕರ ಬದಲಿಗೆ ಸೆಕ್ಸ್ ಡಾಲ್! ಕೊರಿಯಾ ಫುಟ್‌ಬಾಲ್ ಸ್ಟೇಡಿಯಂನಲ್ಲಿ ವಿವಾದ

    ಸಿಯೊಲ್: ಕರೊನಾ ವೈರಸ್ ಭೀತಿಯಿಂದ ಕಳೆದ ಎರಡು ತಿಂಗಳಿಂದ ಜಾಗತಿಕ ಕ್ರೀಡಾ ಚಟುವಟಿಕೆಗಳಿಗೆ ಗರ ಬಡಿದಂತಾಗಿದೆ. ಹಂತ ಹಂತವಾಗಿ ಸುಧಾರಿಸಿದಂತೆ ಅಲ್ಲಲ್ಲಿ ಖಾಲಿ ಸ್ಟೇಡಿಯಂಗಳಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ದಕ್ಷಿಣ ಕೊರಿಯಾದ ಅಗ್ರ ಫುಟ್‌ಬಾಲ್​ ಕ್ಲಬ್‌ವೊಂದು ವಾರಾಂತ್ಯದಲ್ಲಿ ನಡೆದ ಕೆ-ಲೀಗ್ ಪಂದ್ಯವೊಂದರಲ್ಲಿ ಖಾಲಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸ್ಥಾನವನ್ನು ತುಂಬಲು ಸೆಕ್ಸ್ ಡಾಲ್‌ಗಳನ್ನು (ಲೈಂಗಿಕ ಆಟಿಕೆ ಗೊಂಬೆ) ಸ್ಟಾೃಂಡ್‌ಗಳಲ್ಲಿ ಇಡುವ ಮೂಲಕ ಮುಜುಗರಕ್ಕೀಡಾಗಿದೆ. ಅಭಿಮಾನಿಗಳ ಹಾಗೂ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ಕ್ಲಬ್ ಕ್ಷಮೆಯಾಚಿಸಿದೆ. ಪ್ರತಿಷ್ಠಿತ ಸಿಯೊಲ್‌ನ ವಿಶ್ವಕಪ್ ಫುಟ್‌ಬಾಲ್ ಮೈದಾನದಲ್ಲೇ ಈ ವಿವಾದಾತ್ಮಕ ಘಟನೆ ನಡೆದಿದೆ.

    ಇದನ್ನೂ ಓದಿ:ಕರೊನಾ ನಂತರವೂ ಕ್ರೀಡಾಪಟುಗಳ ಆತಂಕ ದೂರವಾಗದು

    ಫುಟ್‌ಬಾಲ್ ಯಾವುದೇ ಲೀಗ್ ಪಂದ್ಯಗಳಿರಲಿ, ಪ್ರೇಕ್ಷಕರ ಸಂಖ್ಯೆಗೇನು ಕಮ್ಮಿಯಿಲ್ಲ. ತವರು ನೆಲದಲ್ಲಿ ನಡೆಯುವ ಪಂದ್ಯಗಳನ್ನು ಆತಿಥೇಯ ತಂಡಗಳು ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತವೆ. ಅದಕ್ಕೆ ಅಭಿಮಾನಿಗಳ ಹಾಜರಾತಿಯೇ ದೊಡ್ಡ ಕೊಡುಗೆ. ಕರೊನಾ ವೈರಸ್ ಭೀತಿಯಿಂದಾಗಿ ಪ್ರೇಕ್ಷಕರಿಗೆ ನಿಷೇಧವಿದ್ದ ಕಾರಣ, ಕೊರಿಯಾದ ಸಿಯೊಲ್ ತಂಡ, ಸ್ಟೇಡಿಯಂನ ಗ್ಯಾಲರಿಗಳಲ್ಲಿ ಪ್ರೇಕ್ಷಕರ ಮಾದರಿ ಕಟೌಟ್, ಜತೆಗೆ ಸೆಕ್ಸ್ ಡಾಲ್‌ಗಳನ್ನಿಡುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದೆ. ಭಾನುವಾರ ಗುವಾಂಗ್ಝು ಎದುರಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ತಂಡಕ್ಕೆ ಪ್ರಾಯೋಜಕತ್ವ ವಹಿಸಿರುವ ಕಂಪನಿ, ಕೆಲವೊಂದು ಆಟಿಕೆಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇಟ್ಟಿತ್ತು. ಸೆಕ್ಸ್ ಡಾಲ್‌ಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಕ್ಲಬ್ ಸ್ಪಷ್ಟನೆ ನೀಡಿದೆ.

    ಪ್ರೇಕ್ಷಕರ ಬದಲಿಗೆ ಸೆಕ್ಸ್ ಡಾಲ್! ಕೊರಿಯಾ ಫುಟ್‌ಬಾಲ್ ಸ್ಟೇಡಿಯಂನಲ್ಲಿ ವಿವಾದ

    ಸಿಟ್ಟಾದ ಅಭಿಮಾನಿಗಳು….
    ಟೀವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಅವಮಾನ. ಸ್ಟೇಡಿಯಂನಲ್ಲಿ ಎಕ್ಸ್-ರೇಟೆಡ್ ವಲಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಕೊರಿಯಾದಲ್ಲಿ ಎರಡು ತಿಂಗಳಿಂದ ನಿಂತುಹೋಗಿದ್ದ ಕ್ರೀಡಾ ಚಟುವಟಿಕೆಗಳು ಮೇ 8ರಂದು ಪುನರಾರಂಭ ಕಂಡಿವೆ. ಸಿಯೋಲ್‌ನಲ್ಲಿ ವಿಶ್ವಕಪ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸಿಯೊಲ್ ಗೆದ್ದುಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts