Cop: ತಂದೆಯ ಹತ್ಯೆ: 25 ವರ್ಷದ ನಂತರ ಸೇಡು ತೀರಿಸಿಕೊಂಡ ಪುತ್ರಿ!

ಅಪ್ರಾಪ್ತ ಸಹೋದರರನ್ನು ವಿವಸ್ತ್ರಗೊಳಿಸಿ, ಸರಪಣಳಿಗಳಿಂದ ಕಟ್ಟಿಹಾಕಿ ಥಳಿಸಿದ ಬಳಿಕ ಮೆರವಣಿಗೆ
ಸಾಂದರ್ಭಿಕ ಚಿತ್ರ
Published on

ಬ್ರೆಸಿಲಿಯಾ(ಬ್ರೆಜಿಲ್): ತನ್ನ ತಂದೆಯ ಕೊಲೆಗಾರನ ಮೇಲೆ ಪುತ್ರಿ ಅನಿರೀಕ್ಷಿತ ಸೇಡು ತೀರಿಸಿಕೊಂಡಿದ್ದಾಳೆ. ಅಪ್ಪನ ಸಾವಿಗೆ ಕಾರಣನಾದವನನ್ನು ಹಿಡಿಯಲೆಂದೇ ಪಣತೊಟ್ಟು ಪೊಲೀಸ್ ಅಧಿಕಾರಿಯಾಗಿ(Cop) ಗುರಿ ಸಾಧಿಸುತ್ತಾಳೆ. ಬ್ರೆಜಿಲ್ ನಲ್ಲಿ ಬೆಳಕಿಗೆ ಬಂದ ಈ ಘಟನೆ ಇದೀಗ ಸಂಚಲನ(ವೈರಲ್ ) ಆಗಿ ಮಾರ್ಪಟ್ಟಿದೆ .

ಜಸ್ಲೀನ್ ಸಿಲ್ವಾ ಡಿ ಸೂಸ್ ಗೆ 1999ರಲ್ಲಿ ಕೇವಲ 9 ವರ್ಷ. ಆಕೆಗೆ ಇತರ ನಾಲ್ಕು ಸಹೋದರಿಯರಿದ್ದಾರೆ. ಆಕೆಯ ತಂದೆ ಜಿವಾಲ್ಡೊ ಡೀ ಡೋಸ್ ಒಂದು ದಿನ ತನ್ನ ಸ್ನೇಹಿತ ಅಲ್ವೆಸ್ ಗೊಮೆಜ್‌ಗೆ ಆಟದಲ್ಲಿ ಗೆದ್ದ ನಂತರ 25ಡಾಲರ್​ ಸಾಲ ನೀಡಿದ್ದಾನೆ. ಆದರೆ ಸಾಲ ತೀರಿಸುವಲ್ಲಿನ ವಿಳಂಬದಿಂದಾಗಿ ಅಲ್ವೆಸ್ ಮತ್ತು ಜಿವಾಲ್ಡೊ ಪರಸ್ಪರ ಕಿತ್ತಾಡಿಕೊಂಡಿದ್ದರು. ಕಡೆಗೆ ಸಾಲ ತೀರಿಸಲಾಗದೆ ಜಿವಾಲ್ಡೊನನ್ನು ಅಲ್ವೆಸ್ ಹತ್ಯೆಮಾಡಿದ.

ಜಿವಾಲ್ಡೊ ಹತ್ಯೆ ಬಳಿಕ ಕುಟುಂಬದ ಸಂಪೂರ್ಣ ಹೊರೆ ಜಾಸ್ಲೀನ್ ತಾಯಿಯ ಮೇಲೆ ಬಿದ್ದಿತು. ಹಣಕಾಸಿನ ತೊಂದರೆ ಹೇಳತೀರದಾಯಿತು. ಆದರೂ ತಾಯಿ ಮಕ್ಕಳನ್ನು ಕ್ರಮಬದ್ಧವಾಗಿ ಬೆಳೆಸಿದರು. ತಮ್ಮ ಕುಟುಂಬಕ್ಕೆ ತುಂಬಾ ತೊಂದರೆ ಉಂಟುಮಾಡಿದ್ದಕ್ಕಾಗಿ ಅಲ್ವೆಸ್ ವಿರುದ್ಧ ಜಾಸ್ಲೀನ್‌ನ ದ್ವೇಷವು ಬೆಳೆಯಿತು.

ಆಕೆ 18 ನೇ ವಯಸ್ಸಿನಲ್ಲಿ ಕಾನೂನು ಕಾಲೇಜಿಗೆ ಸೇರಿಕೊಂಡಳು. ಓದು ಮುಗಿಸಿದ ನಂತರ ಆಕೆಗೆ ಪೊಲೀಸ್ ಕೆಲಸ ಸಿಕ್ಕಿತು. ಆಗ ತಂದೆ ಕೊಲೆಗಾರನನನ್ನು ಬಂಧಿಸಲು ಮುಂದಾದಳು. ಆದರೆ 13 ವರ್ಷಗಳಿಂದ ಪರಾರಿಯಾಗಿದ್ದ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಳು. 2013 ರಲ್ಲಿ ಈ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತು.

ಜಸ್ಲೇನ್ ಕೊನೆಗೂ ತಾನು ಬಯಸಿದ್ದನ್ನು ಸಾಧಿಸಿದಳು.ಆರೋಪಿಗೆ ಕೊನೆಗೂ ಜೈಲು ಶಿಕ್ಷೆಯಾಗಿದೆ. ಈ ಘಟನೆಯು ನ್ಯಾಯಾಂಗದ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ, ”ಎಂದು ಜಸ್ಲೇನ್ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net