

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಲು ಹುಚ್ಚು ಸಾಹಸಗಳಿಗೆ ಕೈಹಾಕುತ್ತಿರುವುದನ್ನು ಕಾಣಬಹುದು. ಅದೇ ರೀತಿ ಇಲ್ಲೊಬ್ಬ ಯುವಕ ಸಾಲಾಗಿ ಬೈಕ್ ಗಳನ್ನು ನಿಲ್ಲಿಸಿ ಅವುಗಳ ಮೇಲೆ ಲಾಂಗ್ಜಂಪ್(Bike Stunt) ಮಾಡಿದ್ದಾನೆ. ಆದರೆ ಮುಂಜಾಗ್ರತೆ ವಹಿಸದ ಕಾರಣ ಮುಂದ ರಸ್ತೆ ಮೇಲೆ ಹಾರಿಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಎಲ್ಲರ ಮುಂದೆ ಹೀರೋ ಆಗಿ ಬಿಲ್ಡ್ ಅಪ್ ತೆಗೆದುಕೊಳ್ಳಲು ಹೋಗಿ ಮುಖ ಕಿತ್ತುಕೊಂಡು ಆಸ್ಪತ್ರೆ ಪಾಲಾಗಿ ನಗೆಪಾಟಲಿಗೀಡಾಗಿದ್ದಾನೆ.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿರುವಂತೆ ಯುವಕ ತನ್ನ ಸ್ನೇಹಿತರಿಗೆ ಸವಾಲು ಹಾಕಿ ಸಾಲಾಗಿ ನಿಲ್ಲಿಸಲಾಗಿದ್ದ ಮೂರು ಬೈಕ್‌ಗಳ ಮೇಲೆ ಒಂದು ಬದಿಯ ದೂರದಿಂದ ಓಡಿ ಬಂದು ಇನ್ನೊಂದು ಕಡೆಗೆ ವೀರಾವೇಶದಿಂದ ಹಾರಿದ್ದಾನೆ.
ಆದರೆ ಆದರೆ ಇಲ್ಲಿ ಅನಿರೀಕ್ಷಿತ ಘಟನೆ ಸಂಭವಿಸಿದೆ. ಬೈಕ್ ಮೇಲೆ ಜಿಗಿದ ವ್ಯಕ್ತಿ ನಿಯಂತ್ರಣ ತಪ್ಪಿ ಇನ್ನೊಂದು ಬದಿಯಲ್ಲಿ ಕಾಲು ಬೈಕ್ ಸೀಟಿಗೆ ತಗುಲಿ ಕೆಳಗೆ ಬಿದ್ದಿದ್ದಾನೆ. ಈ ಘಟನೆಯಲ್ಲಿ ಆತನ ಮುಖ ಬಲವಾಗಿ ನೆಲಕ್ಕೆ ಅಪ್ಪಳಿಸಿದೆ. ನೋವು ತಾಳಲಾರದೆ ಕಿರುಚಿದ್ದಾನೆ. ಬಳಿಕ ಅಲ್ಲೇ ಮೂರ್ಛೆ ಹೋಗಿದ್ದಾನೆ.
ಆತ ಕೆಳಗೆ ಬೀಳುವುದನ್ನು ನೋಡಿ ಅಲ್ಲಿದ್ದ ಗೆಳೆಯರು ಓಡಿ ಬಂದು ಮೇಲೆತ್ತಿದ್ದಾರೆ. ಈ ನಡುವೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ವಿವಿಧ ರೀತಿಯ ಎಮೋಜಿಗಳ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ. "ಏನೋ ಮಾಡಲು ಹೋಗಿ ಕೊನೆಗೆ ಮತ್ತೇನೋ ಆಯಿತು" ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ನಿನಗಿದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 3 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿ ವೈರಲ್ ಆಗಿದೆ.