

ಬೆಂಗಳೂರು: ಕಾರ್ವಿುಕ ನಿಧಿ (ಪಿ.ಎಫ್) ಹಣ ಕೊಡಲು ವಿಳಂಬವಾಗಿದ್ದಕ್ಕೆ ಕುಪಿತಗೊಂಡ ನೌಕರ, ಕೆಲಸ ಕೊಟ್ಟಿದ್ದ ಕಂಪನಿ ಮಾಲೀಕ ಮತ್ತು ಆತನ ಪತ್ನಿಯ ಫೋನ್ ನಂಬರ್ ಅನ್ನು ಡೇಟಿಂಗ್ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ್ದಾನೆ.
ಲ್ಯಾವೆಲ್ಲೆ ರಸ್ತೆಯಲ್ಲಿರುವ ಕಂಪನಿ ಮಾಲೀಕ ಕೊಟ್ಟ ದೂರಿನ ಮೇರೆಗೆ ಹರಿಪ್ರಸಾದ್ ಜೋಷಿ ಎಂಬಾತನ ವಿರುದಟಛಿ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿಎಫ್ ಹಣ ಕೊಡುವಂತೆ ಹರಿಪ್ರಸಾದ್ ಕೇಳಿದ್ದನು. ಹಿಂದಿನ ಬಿಜಿನೆಸ್ ಮುಖ್ಯಸ್ಥರು ದಾಖಲಾತಿ ನೀಡಿಲ್ಲ.
ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಮಾಲೀಕರು ಹೇಳಿದ್ದರು. ಇಷ್ಟಕ್ಕೆ ಕುಪಿತನಾದ ಅರೋಪಿ, ಡೇಟಿಂಗ್ ವೆಬ್ಸೈಟ್ನಲ್ಲಿ ಮಾಲೀಕ ಮತ್ತು ಆತನ ಪತ್ನಿ ಫೋನ್ ನಂಬರ್ ಅಪ್ಲೋಡ್ ಮಾಡಿದ್ದಾನೆ.