More

    ಇವತ್ತು 500 ಕಿಲೋ, ನಾಳೆ 600 ಕಿಲೋ… ಭಾರ ಹೊರುವುದರಲ್ಲಿ ಆನೆಗೆ ಆನೆಯೇ ಸಾಟಿ!

    ಮೈಸೂರು: ನಾಡಹಬ್ಬ ದಸರಾ ಉತ್ಸವ ಸಮೀಪಿಸುತ್ತಿದ್ದು ದಸರಾ ಗಜಪಡೆ ತಾಲೀಮು ಬಿರುಸುಗೊಂಡಿದೆ. ಇದುವರೆಗೆ 500 ಕೆ.ಜಿ. ಭಾರ ಹೊತ್ತು ತಾಲೀಮು ನಡೆಸಿದ ಗಜಪಡೆ ಬುಧವಾರದಿಂದ 600 ಕೆ.ಜಿ. ಭಾರ ಹೊರುವ ತಾಲೀಮು ನಡೆಸಲಿದೆ.

    ಮಂಗಳವಾರ ಗೋಪಿ ಆನೆ 500 ಕೆ.ಜಿ. ಭಾರ ಹೊತ್ತು ತಾಲೀಮು ನಡೆಸಿತು. ಬುಧವಾರ ಅಂಬಾರಿ ಆನೆ ಅಭಿಮನ್ಯು 600 ಕೆ.ಜಿ. ಭಾರ ಹೊರುವ ತಾಲೀಮು ನಡೆಸಲಿದೆ. ಅರಮನೆ ಆವರಣದಲ್ಲಿ ಒಂದೆರಡು ದಿನಗಳ ಒಳಗೆ ಕ್ರೇನ್ ಅಳವಡಿಸಲಾಗುತ್ತದೆ. ನಂತರ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಗುವುದು. ಅಲ್ಲಿಯವರೆಗೆ ಭಾರ ಹೊರುವ ತಾಲೀಮು ಮುಂದುವರೆಯಲಿದೆ.

    ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಸಜ್ಜುಗೊಳಿಸುವ ಕಾರ್ಯ ಮಂಗಳವಾರ ಚಾಮುಂಡಿಬೆಟ್ಟದಲ್ಲಿ ನಡೆಯಿತು. ಅರಮನೆಯಿಂದ ಅ.7ಕ್ಕೆ ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ಕೊಂಡೊಯ್ಯಲಾಗಿತ್ತು. ದಸರಾ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು.

    ಮೈಸೂರು ದಸರಾ: ಡಾ.ಸಿ.ಎನ್.ಮಂಜುನಾಥ ಉದ್ಘಾಟನೆ- 6 ಕೋವಿಡ್ ಹೀರೋಗಳ ಸಾಥ್

    Editorial: ದಸರಾ ಸಂಭ್ರಮದೊಂದಿಗೆ ಸುರಕ್ಷತೆಯೂ ಆದ್ಯತೆಯಾಗಲಿ

    ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts