ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪ

ಮೈಸೂರು: ಕರೊನಾ ಆತಂಕದ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಹಿರಿಯ ಸಾಹಿತಿ‌ ಎಸ್.ಎಲ್.ಭೈರಪ್ಪ, ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನ ಸೇರುವುದು ಬೇಡ. ಜಂಬೂಸವಾರಿಗೆ ಮಾವುತರು ಇದ್ದರೆ ಸಾಕು ಎಂದಿದ್ದಾರೆ. ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಬೂಸವಾರಿಯನ್ನ ಮಾವುತರೆ ಮಾಡ್ತಾರೆ. ಹಾಗಿದ್ದ ಮೇಲೆ ಜನ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. ಕರೊನಾ ಸೋಂಕು ವ್ಯಾಪಕವಾಗಿ … Continue reading ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪ