blank

ದಸರಾ ಗಜಪಡೆ ತೂಕದಲ್ಲಿ ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ! ಅಭಿಮನ್ಯು ತೂಕವೆಷ್ಟು?

Elephant Wieght

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು.

ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನನೇ ಈ ಬಾರಿಯೂ ಬಲಶಾಲಿಯಾಗಿದ್ದಾರೆ. ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಅರ್ಜುನ ಉಳಿಸಿಕೊಂಡಿದ್ದಾನೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಹಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್​ನಲ್ಲಿ 14 ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ.

ಆನೆಗಳ ತೂಕದ ವಿವರ
1. ಸುಗ್ರೀವ – 5310 ಕೆಜಿ
2. ಗೋಪಿ- 5240 ಕೆಜಿ
3. ಧನಂಜಯ – 5180
4. ಕಂಜನ್ – 4505
5. ಹಿರಣ್ಯ – 3025
6. ರೋಹಿತ್ – 3620
7. ಪ್ರಶಾಂತ್ – 5215
8. ಅಭಿಮನ್ಯು – 5460
9. ವಿಜಯ – 2845
10. ಭೀಮ – 4870
11. ಲಕ್ಷ್ಮೀ – 3365
12. ಮಹೇಂದ್ರ – 4835
13. ವರಲಕ್ಷ್ಮಿ – 3225
14. ಅರ್ಜುನ- 5850 ಕೆ ಜಿ ತೂಕ.

ಡಿಸಿಎಫ್ ಸೌರಭ್ ಕುಮಾರ್ ಸಮ್ಮುಖದಲ್ಲಿ ಗಜಪಡೆಯ ತೂಕ ಪರೀಕ್ಷೆ ನಡೆಯಿತು.

ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಗಜಪಡೆ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಸೆ. 6ರಂದು ಮೊದಲ ಹಂತದ ಪರೀಕ್ಷೆ ಮತ್ತು ಸೆ.27ರಂದು ಎರಡನೇ ಹಂತದ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಅಭಿಮನ್ಯು 5160 ರಿಂದ 5300ಕೆಜಿಗೆ ತೂಕ ಏರಿಸಿಕೊಂಡಿದ್ದ. ಭೀಮ 4370 ರಿಂದ 4685, ಮಹೇಂದ್ರ 4530 ರಿಂದ 4665, ಧನಂಜಯ 4940 ರಿಂದ 4990, ಗೋಪಿ 5080 ರಿಂದ 5145, ಕಂಜಾನ್​ 4240 ರಿಂದ 4395, ವಿಜಯಾ 2830 ರಿಂದ 2885 ಮತ್ತು ವರಲಕ್ಷ್ಮಿ 3020 ರಿಂದ 3170 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ದವು.

ಮೊದಲ ಹಂತದ ತೂಕದಲ್ಲಿ ಅರ್ಜುನ 5680 ಕೆಜಿ ತೂಕವಿದ್ದ. ಇದೀಗ 5850 ಕೆಜಿ ತೂಕವನ್ನು ಹೊಂದಿದ್ದು, 170 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದೆ. ಇಡೀ ಗಜಪಡೆಯ ಪೈಕಿ ಅರ್ಜುನನೇ ತುಂಬಾ ಬಲಶಾಲಿಯಾಗಿದ್ದಾನೆ.

ದಸರಾ ಗಜಪಡೆಯ ತೂಕ ಪರೀಕ್ಷೆ: ಯಾವ ಆನೆಯ ಭಾರ ಎಷ್ಟು? ಇಲ್ಲಿದೆ ಮಾಹಿತಿ…

2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ; ಈ ಚರ್ಮ ಎಲ್ಲಿಂದ ಬಂತು? ಎಂದು ಸ್ಪಷ್ಟನೆ ನೀಡಿದ ವಿನಯ್ ಗುರೂಜಿ

Share This Article

ಬೇಸಿಗೆಯ ಆರೋಗ್ಯಕ್ಕಾಗಿ ಇವುಗಳಿಗೆ ವಿದಾಯ ಹೇಳಿ! ಇಲ್ಲದಿದ್ದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ Summer Foods

Summer Foods : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದ್ದರಿಂದ ದೇಹವನ್ನು…

ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನೆಯ ಶಾಂತಿ, ನೆಮ್ಮದಿ ಕೆಡಿಸುತ್ತವೆ! ಹುಷಾರ್​…Vastu Tips

Vastu Tips:  ನಮ್ಮ ದೈನಂದಿನ ಅಭ್ಯಾಸಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಹ ನಮ್ಮ ಮನೆಯ ವಾಸ್ತುಗೆ…

ರಾತ್ರಿ ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಇಂದೇ ಈ ಅಭ್ಯಾಸ ಬಿಟ್ಟು ಬಿಡಿ.. Sleeping Disorder

Sleeping Disorder : ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೆಲವರಿಗೆ  ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಇರುತ್ತದೆ.…