More

    2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ; ಈ ಚರ್ಮ ಎಲ್ಲಿಂದ ಬಂತು? ಎಂದು ಸ್ಪಷ್ಟನೆ ನೀಡಿದ ವಿನಯ್ ಗುರೂಜಿ

    ಬೆಂಗಳೂರು: ಹುಲಿ ಉಗುರಿನ ಲಾಕೆಟ್​ ಧರಿಸಿದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನವಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.  ಈ ಬೆನ್ನಲ್ಲೇ ಜಗ್ಗೇಶ್​​, ದರ್ಶನ್​,  ನಿಖಿಲ್​​​ ಕುಮಾರಸ್ವಾಮಿ ಅವರ ಬಳಿ ಕೂಡಾ ಹುಲಿ ಉಗುರಿನ ಲಾಕೆಟ್ ಇದೆ. ವಿನಯ್​​​ ಗೂರೂಜಿ ಬಳಿ ಹುಲಿ ಚರ್ಮ ಇದೆ​​ ಎನ್ನುವ ಕೆಲವು ಫೋಟೋ ವಿಡಿಯೋಗಳು ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿ  ವಿನಯ್​​ ಗೂರುಜಿ ಅವರೆ ಮಾಧ್ಯಮಗಳ ಮುಂದೆ ಅವರು ಸ್ಪಷ್ಟನೆ ನೀಡಿದ್ದಾರೆ.

    ಹುಲಿ ಉಗುರಿನ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ, ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ವೈರಲ್ ಆಗಿತ್ತು. ಹೀಗಾಗಿ 2022 ರಲ್ಲಿ ಅದನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ ಎನ್ನುವ ಮೂಲಕ ಹುಲಿ ಚರ್ಮದ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ.

    ವಿನಯ್ ಗುರೂಜಿ ಮಾತನಾಡಿ, 2 ವರ್ಷದ ಹಿಂದೆ ಶಿವಮೊಗ್ಗ ಮೂಲದ ಅಮರೇಂದ್ರ ಕಿರೀಟಿ ಅವರ ಬಳಿ ಇದ್ದ ಹುಲಿ ಚರ್ಮ ವಂಶ ಪಾರಂಪರ್ಯವಾಗಿ ಅವರಿಗೆ ಬಂದಿದ್ದು. ಸನ್ಯಾಸಿಗಳು ಹುಲಿ ಚರ್ಮವನ್ನ ಇಟ್ಟುಕೊಳ್ಳುತ್ತಾರೆ ಎಂದು ಹುಲಿ ಚರ್ಮ ನೀಡಿದ್ದರು. ನಾನು ಹುಲಿ ಚರ್ಮದ ಮೇಲೆ ಒಂದು ದಿನ ಕುಳಿತುಕೊಂಡಿದ್ದೆ ಅದರ ಫೋಟೋ ಕೂಡ ತೆಗೆದುಕೊಂಡಿದ್ದರು. ಆಶ್ರಮಕ್ಕೆ ಹುಲಿ ಚರ್ಮ ನೀಡುವಾಗ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದರು. ಹುಲಿ ಚರ್ಮ ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಯಾರೋ ಹೇಳಿದರಂತೆ, ಸನ್ಯಾಸಿಗಳು ಕುತ್ತುಕೊಳ್ಳುವ ವಸ್ತು ಮನೆಯಲ್ಲಿ ಇದ್ದರೆ ಸಂಸಾರಿಗಳಿಗೆ ಶ್ರೇಯಸ್ ಅಲ್ಲ ಅಂದಿದ್ರಂತೆ, ನನ್ನ ಬಳಿ ಅಮರೇಂದ್ರ ಕೇಳಿದ್ರು ಹುಲಿ ಚರ್ಮ ಏನು ಮಾಡಲಿ ಎಂದು. ಅದನ್ನ ಸರ್ಕಾರಕ್ಕೆ ನೀಡುವಂತೆ ನಾನು ಹೇಳಿದ್ದೆ. ಬಳಿಕ ಅವರು ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

    ನಮ್ಮ ಬಳಿ ಹುಲಿ ಚರ್ಮಕ್ಕೆ ಸಂಬಂಧಿಸಿದ ದಾಖಲೆಗಳಿವೆ. ನಾವು ಕಾನೂನು ಅಡಿಯಲ್ಲಿ ಇರುವವರು. ತನಿಖೆಗೆ ಎಲ್ಲ ರೀತಿಯಾಗಿ ಸಹಕಾರ ನೀಡುತ್ತೇನೆ. ನಾನು ನನ್ನ ಪ್ರಜಾಪ್ರಭುತ್ವದಲ್ಲಿದ್ದೇನೆ. ನಾನು ನನ್ನ ಸಿದ್ಧಾಂತಗಳ ಜೊತೆ ಬದುಕುವ ಪ್ರಯತ್ನ ಮಾಡುತ್ತಿದ್ದೇನೆ. ಐದು ಜನ ದ್ವೇಷ ಮಾಡಿದ್ರೆ 500 ಜನ ಪ್ರೀತಿಸುತ್ತಾರೆ. ಇದು ಪ್ರತಿ ವ್ಯಕ್ತಿಯ ವ್ಯವಸ್ಥೆ. ಸಾಮಾಜಿಕ ರಂಗದಲ್ಲಿ ಕೆಲಸ ಮಾಡುವುದರಿಂದ ಸಮಾಜದ ನಿಂದನೆಯನ್ನ ಸಂಧ್ಯಾ ವಂದನೆಯಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

    ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

    ನಾನು ಧರಿಸಿದ್ದ ಹುಲಿ ಉಗುರು ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ: ನಿಖಿಲ್ ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts