More

    ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪ

    ಮೈಸೂರು: ಕರೊನಾ ಆತಂಕದ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಹಿರಿಯ ಸಾಹಿತಿ‌ ಎಸ್.ಎಲ್.ಭೈರಪ್ಪ, ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನ ಸೇರುವುದು ಬೇಡ. ಜಂಬೂಸವಾರಿಗೆ ಮಾವುತರು ಇದ್ದರೆ ಸಾಕು ಎಂದಿದ್ದಾರೆ.

    ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಬೂಸವಾರಿಯನ್ನ ಮಾವುತರೆ ಮಾಡ್ತಾರೆ. ಹಾಗಿದ್ದ ಮೇಲೆ ಜನ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.

    ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಹೆಚ್ಚು ಜನ ಸೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಎಸ್.ಎಲ್.ಭೈರಪ್ಪ, ಹೆಚ್ಚು ಜನರು ಸೇರಿ ಸಮಸ್ಯೆಯಾದರೆ ಯಾರು ಹೊಣೆ? ಎಲ್ಲರೂ ಅವರ ಮನೆಗಳಲ್ಲೇ ದಸರಾ ಆಚರಣೆ ಮಾಡಲಿ. ಉದ್ಘಾಟನಾ ಕಾರ್ಯಕ್ರಮದಲ್ಲಿ 200 ಮಂದಿ ಏಕೆ ಭಾಗಿಯಾಗಬೇಕು ಎಂದಿದ್ದಾರೆ.

    ಕೆಲವರು ದಸರಾದಿಂದ ಬಿಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿ ಕರೊನಾ ಹೆಚ್ಚಾದರೆ ಹೊಣೆ ಯಾರು? ಆರೋಗ್ಯದ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದ್ದಾರೆ. ಎಸ್.ಎಲ್.ಭೈರಪ್ಪ ಅವರು ಕಳೆದ ವರ್ಷ ದಸರಾ ಉದ್ಘಾಟಿಸಿದ್ದರು.

    ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪಪ್ರಶಸ್ತಿ ಪ್ರದಾನ: 2020ನೇ ಸಾಲಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಡಾ. ಎಸ್.ಎಲ್. ಭೈರಪ್ಪ ಅವರಿಗೆ ಮೈಸೂರಿನ ಪ್ರಮತಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು.

    15 ವರ್ಷಗಳಿಂದ ಪ್ರತೀ ವರ್ಷ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕಾರಂತರ ಹುಟ್ಟೂರು ಕೋಟದಲ್ಲಿಯೇ ಗಣ್ಯರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಪ್ರಶಸ್ತಿ ಪುರಸ್ಕೃತರ ಊರಿಗೆ ತೆರಳಿ ಅಲ್ಲಿಯೇ ಸರಳ ಕಾರ್ಯಕ್ರಮ ನಡೆಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರು ಉಪಸ್ಥಿತರಿದ್ದರು.

    ದಸರಾ ಉದ್ಘಾಟಕರಾಗಿ ಡಾ. ಮಂಜುನಾಥ್​ ಆಯ್ಕೆ ಅಂತಿಮ, ಆರು ಮಂದಿ ವಾರಿಯರ್ಸ್​ಗೆ ಸನ್ಮಾನ: ಸಚಿವ ಸೋಮಶೇಖರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts