More

    ಮೈಸೂರು ದಸರಾ: ಡಾ.ಸಿ.ಎನ್.ಮಂಜುನಾಥ ಉದ್ಘಾಟನೆ- 6 ಕೋವಿಡ್ ಹೀರೋಗಳ ಸಾಥ್

    ಮೈಸೂರು: ಕರೊನಾ ವಿರುದ್ಧ ಶ್ರಮಿಸುತ್ತಿರುವ ಕರೊನಾ ಸೇನಾನಿಗಳಿಂದ ಈ ಬಾರಿ ದಸರಾ ಉದ್ಘಾಟಿಸಲು ತೀರ್ವನಿಸಿರುವ ಸರ್ಕಾರ ನಾಡಹಬ್ಬಕ್ಕೆ ಚಾಲನೆ ನೀಡುವ ಆತಿಥ್ಯವನ್ನು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಅವರಿಗೆ ನೀಡಿದೆ. ಅವರಿಗೆ ಆರು ಮಂದಿ ಕೋವಿಡ್ ಹೀರೋಗಳು ಸಾಥ್ ನೀಡಲಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಇವರೆಲ್ಲರನ್ನೂ ಸನ್ಮಾನಿಸಲಾಗುವುದು, ಡಾ.ಸಿ.ಎನ್.ಮಂಜುನಾಥ ಉದ್ಘಾಟನಾ ಭಾಷಣ ಮಾಡಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

    ಆರು ಅತಿಥಿಗಳಾರು?

    ಮರಗಮ್ಮ-ಪೌರಕಾರ್ವಿುಕ ಸಿಬ್ಬಂದಿ, ಡಾ.ನವೀನ್ ಕುಮಾರ್-ವೈದ್ಯಕೀಯ ಅಧಿಕಾರಿ, ರುಕ್ಮಿಣಿ-ಸ್ಟಾಫ್ ನರ್ಸ್, ನೂರ್​ಜಾನ್-ಆಶಾ ಕಾರ್ಯಕರ್ತೆ, ಪಿ.ಕುಮಾರ್-ಪೊಲೀಸ್ ಪೇದೆ, ಅಯೂಬ್ ಅಹಮದ್-ಸಾಮಾಜಿಕ ಕಾರ್ಯಕರ್ತ

    ಮೈಸೂರು ದಸರಾ: ಡಾ.ಸಿ.ಎನ್.ಮಂಜುನಾಥ ಉದ್ಘಾಟನೆ- 6 ಕೋವಿಡ್ ಹೀರೋಗಳ ಸಾಥ್

    ವರದಿ ಪ್ರಕಾರವೇ ಆಚರಣೆ: ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸೇರುವ ಬಗ್ಗೆ ಚರ್ಚೆ ಆರಂಭಗೊಂಡಿವೆ. ಹಾಗಾಗಿ ತಜ್ಞರ ತಂಡ ನೀಡಿದ ವರದಿ ಪ್ರಕಾರವಾಗಿಯೇ ದಸರಾ ಆಚರಿಸಲಾಗುವುದು.
    ಮುಖ್ಯಮಂತ್ರಿ ಜತೆ ಈ ಬಗ್ಗೆ ರ್ಚಚಿಸಿದ್ದು, ದಸರಾ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ 200 ಜನ, ಜಂಬೂಸವಾರಿಗೆ 300 ಜನ ಸೇರಿ ಯಾವೆಲ್ಲ ನಿಯಮಗಳನ್ನು ವಿಧಿಸಲಾಗಿದೆಯೋ ಅದರಂತೆಯೇ ಕಾರ್ಯಕ್ರಮವನ್ನು ರೂಪಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.

    ದೀಪಾಲಂಕಾರದ ಬಗ್ಗೆ ಉನ್ನತಮಟ್ಟದ ಸಮಿತಿಯಲ್ಲಿ ತೀರ್ವನವಾಗಿದೆ. ಕಳೆದ ಬಾರಿ ಇದ್ದ ನೂರಾರು ಕಿ.ಮೀ. ದೂರದ ವ್ಯಾಪ್ತಿಯನ್ನು ಈ ಬಾರಿ 50 ಕಿ.ಮೀ.ಗೆ ಸೀಮಿತಗೊಳಿಸಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಅದ್ಯತೆ ನೀಡಲಾಗಿದ್ದು, 8 ದಿನ ಮಾತ್ರ ಕಾರ್ಯಕ್ರಮ ಇರಲಿದೆ. ಕರೊನಾ ಹಿನ್ನೆಲೆಯಲ್ಲಿ ಎಲ್ಲ ಕಡೆ ರ್ಪಾಂಗ್​ಗೆ ಅನುಮತಿ ಕೊಡುವುದಿಲ್ಲ ಎಂದು ಸಚಿವರು ವಿವರಿಸಿದರು.

    ನಾಗರಹೊಳೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಪುನರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts