

ಬೆಂಗಳೂರು: ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ಗೆ ಇಂದು (ಸೋಮವಾರ) ಜನ್ಮದಿನದ ಸಂಭ್ರಮ. ಈ ನಿಮಿತ್ತ ಸಾಕಷ್ಟು ತೆಲುಗಿನ ಸಿನಿಮಾ ಮಂದಿ ಅವರಿಗೆ ಬರ್ತ್ಡೇಯ ಶುಭಾಶಯ ರವಾನಿಸುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಶುಭಕೋರಿದ್ದಾರೆ.
ಈ ಹಿಂದೆ ಹೈದರಾಬಾದ್ನ್ಲಲಿ ಯಜಮಾನ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಮತ್ತು ಸುಕುಮಾರ್ ಒಬ್ಬರಿಗೊಬ್ಬರು ಮುಖಾಮುಖಿಯಾಗಿದ್ದರು. ಒಂದಷ್ಟು ಹೊತ್ತು ಒಟ್ಟಿಗೆ ಸಮಯ ಕಳೆದು ಸಿನಿಮಾ ವಿಚಾರವನ್ನೂ ಮಾತನಾಡಿದ್ದರು. ಅದರಂತೆ ಇದೀಗ ಅವರ ಜನ್ಮದಿನದ ನಿಮಿತ್ತ ಅವರ ಜತೆಗಿನ ಫೋಟೋ ಶೇರ್ ಮಾಡಿಕೊಂಡು ವಿಶ್ ರವಾನಿಸಿದ್ದಾರೆ.
ಹೀಗೆ ಅವರಿಗೆ ಶೂಭ ಕೋರಿದ ಬೆನ್ನಲ್ಲೇ ಇಬ್ಬರೂ ಸೇರಿ ಸಿನಿಮಾ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಯೂ ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಆ ಪ್ರಶ್ನೆಗೆ ಖುದ್ದು ಇಬ್ಬರಿಲ್ಲಿ ಒಬ್ಬರು ಮಾತನಾಡಬೇಕಿದೆ. ಸದ್ಯ ಭಾನುವಾರವಷ್ಟೇ ರಾಬರ್ಟ್ ಸಿನಿಮಾ ಬಿಡುಗಡೆ ಬಗ್ಗೆ ದರ್ಶನ್ ದಿನಾಂಕ ಘೋಷಿಸಿಕೊಂಡಿದ್ದಾರೆ. ಮಾರ್ಚ್ 11ರಂದು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅರ್ಧಕ್ಕೆ ಬಂತು ‘ಆ ಒಂದು ಕನಸು’!
ಸದ್ಯ ರಾಜವೀರ ಮದಕರಿ ನಾಯಕ ಸಿನಿಮಾ ಕೆಲಸಗಳಲ್ಲಿ ದರ್ಶನ್ ತೊಡಗಿಸಿಕೊಂಡರೆ, ಇತ್ತ ಅಲ್ಲು ಅರ್ಜುನ್ ಜತೆಗೆ ಪುಷ್ಪ ಸಿನಿಮಾ ಕೆಲಸಗಳಲ್ಲಿ ಸುಕುಮಾರ್ ಬಿಜಿಯಾಗಿದ್ದಾರೆ.