ಕೊನೆಗೂ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡ ದೀಪಿಕಾ!

deepika-
Published on

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಫೈಟರ್ ಸಿನಿಮಾ ಮೂಲಕ ಆನ್‌ಸ್ಕ್ರೀನ್‌ನಲ್ಲಿ ಮೊದಲ ಸಲ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ಹೃತಿಕ್ ಅವರ 47ನೇ ಜನ್ಮದಿನದ ನಿಮಿತ್ತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಫೈಟರ್’ ಸಿನಿಮಾ ಘೋಷಣೆ ಮಾಡಿದ್ದಾರೆ.

ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯೂ ಅವರೇ ವಹಿಸಿಕೊಂಡಿದ್ದು, ಈ ಹಿಂದೆ ಹೃತಿಕ್ ನಟಿಸಿದ್ದ ‘ಬ್ಯಾಂಗ್ ಬ್ಯಾಂಗ್’ ಮತ್ತು ‘ವಾರ್’ ಸಿನಿಮಾಗಳಿಗೆ ಸಿದ್ಧಾರ್ಥ್ ನಿರ್ದೇಶಿಸಿದ್ದರು. ಇದೀಗ ಮೂರನೇ ಬಾರಿ ಒಂದಾಗುತ್ತಿದ್ದಾರೆ. ಇತ್ತ ನಟಿ ದೀಪಿಕಾ, ಹೃತಿಕ್ ಜತೆ ನಟಿಸುತ್ತಿರುವುದಕ್ಕೆ ‘ಕನಸು ಕೊನೆಗೂ ನನಸಾಯಿತು’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಸದ್ಯ ಘೋಷಣೆ ಆಗಿರುವ ಈ ಚಿತ್ರ ಇನ್ನು ಕೆಲ ದಿನಗಳಲ್ಲಿ ಶೂಟಿಂಗ್ ಸಹ ಆರಂಭಿಸಲಿದೆ. 2022ರ ಸೆಪ್ಟೆಂಬರ್ 30ಕ್ಕೆ ಚಿತ್ರ ಬಿಡುಗಡೆ ಆಗಲಿದೆ ಎಂದೂ ತಂಡ ಚಿತ್ರೀಕಕರಣ ಶುರುವಿಗೂ ಮುಂಚಿತವಾಗಿ ಹೇಳಿಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net