ಚಾರ್ಜ್​​​ಶೀಟ್​ ಸಲ್ಲಿಕೆ ಬೆನ್ನಲ್ಲೇ ಪತ್ನಿಗೆ ಕರೆ ಮಾಡಿದ ದರ್ಶನ್​; ಮಡದಿಯ ಆ ಒಂದು ಮಾತಿಗೆ ದಾಸ ಭಾವುಕ

Vijji Darshan
Published on

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದು, ದರ್ಶನ್​ ಮತ್ತು ಗ್ಯಾಂಗ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅತ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸುತ್ತಿದ್ದಂತೆ ಇತ್ತ ದರ್ಶನ್​ಗೆ ಟೆನ್ಷನ್​ ಹೆಚ್ಚಾಗಿದ್ದು, ಇದರ ನಡುವೆಯೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ಮಾತನಾಡಿದ್ದಾರೆ.

ಪ್ರಿಸನ್ ಕಾಲ್ ಸಿಸ್ಟಮ್​ನಲ್ಲಿ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಂಬರ್​ಅನ್ನು ಸೇವ್​ ಮಾಡಲಾಗಿದ್ದು, ಐದು ನಿಮಿಷಗಳ ಕಾಲ ಪತ್ನಿಯೊಂದಿಗೆ ದರ್ಶನ್​ ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಪತ್ನಿಗೆ ಕರೆ ಮಾಡಿದ ದರ್ಶನ್​ ಚಾರ್ಜ್​ಶೀಟ್​ ಸಲ್ಲಿಕೆ ಮತ್ತು ಇಂದಿನ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಮಾತನಾಡುವ ವೇಳೆ ಪತಿಯ ಆರೋಗ್ಯವನ್ನು ವಿಜಯಲಕ್ಷ್ಮಿ ವಿಚಾರಿಸಿದ್ದು, ಈ ವೇಳೆ ಭಾವುಕರಾಗಿದ್ದಾರೆ. ದರ್ಶನ್​ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಭಾಷಣೆಯನ್ನು ನಿಯಮದ ಪ್ರಕಾರ ಜೈಲಧಿಕಾರಿಗಳು ರೆಕಾರ್ಡ್​ ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್​ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಗಿದ್ದು, ಉಳಿದ ಆರೋಪಿಗಳನ್ನು ತುಮಕೂರು, ಶಿವಮೊಗ್ಗ, ಮೈಸೂರು, ವಿಜಯಪುರ, ಧಾರವಾಡ ಹಾಗೂ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net