ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​​​​; ಶಾಟ್​ಪುಟ್​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಸಚಿನ್ ಖಿಲಾರಿ

Sachin Khilari

ಪ್ಯಾರಿಸ್​: ಪ್ಯಾರಿಸ್​ ಆತಿಥ್ಯದಲ್ಲಿ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್​ ಖಿಲಾರಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪುರುಷರ ಎಫ್46 ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಸರ್ಜೆರಾವ್, 16.32 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಗೆಲ್ಲಲು ನೆರವಾಗಿದ್ಧಾರೆ. ಈ ಮೂಲಕ ಸಚಿನ್​ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೇ ತಿಂಗಳಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 34 ವರ್ಷದ ಖಿಲಾರಿ 16.30 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ಏಷ್ಯನ್ ದಾಖಲೆ ಬರೆದಿದ್ದರು.

ಈ ವಿಭಾಗದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಗ್ರೆಗ್ ಸ್ಟೀವರ್ಟ್ ಸ್ವರ್ಣ ಪದಕವನ್ನು (16.38 ಮೀ.) ಉಳಿಸಿಕೊಂಡರು. ಕ್ರೋವೆಷಿಯಾದ ಲುಕಾ ಬಾಕೊವಿಕ್ ಕಂಚಿನ ಪದಕ (16.27 ಮೀ.) ಗೆದ್ದರು. ಕಳೆದ ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಸಚಿನ್ ಸರ್ಜೆರಾವ್ ಖಿಲಾರಿ ಚಿನ್ನದ ಪದಕ ಗೆದ್ದಿದ್ದರು.

Share This Article

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…