ರೇಣುಕಸ್ವಾಮಿ ಹತ್ಯೆ ಕೇಸ್​: ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್​

darshan bail case postponed
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾದ ನಟ ದರ್ಶನ್ (Actor Darshan) ಇದೀಗ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ನ್ಯಾಯಾಲಯ ವಿಚಾರಣೆಗೆ ಕರೆದಿತ್ತು. ದರ್ಶನ್​ ಪರ ವಾದ ಮಂಡಿಸಿದ ವಕೀಲರು, ವಾದಮಂಡನೆಗೆ ಕೊಂಚ ಕಾಲಾವಕಾಶ ಕೋರಿದ ಹಿನ್ನಲೆ ಇದೀಗ ಕೋರ್ಟ್​ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ. 

ಜಾಮೀನು ನಿರೀಕ್ಷೆಯಲ್ಲಿದ್ದ 'ದಾಸ'ನಿಗೆ ನಿರಾಸೆ

ರೇಣುಕಸ್ವಾಮಿ ಭೀಕರ ಹತ್ಯೆಯಲ್ಲಿ ಕನ್ನಡ ಚಿತ್ರನಟ ದರ್ಶನ್ ಎ2 ಆರೋಪಿಯಾಗಿದ್ದು​, ಪವಿತ್ರಾ ಗೌಡ ಎ1 ಆರೋಪಿ. ಈ ಪ್ರಕರಣದಲ್ಲಿ ದರ್ಶನ್​ ಸಹಚರರು ಸದ್ಯ ಜೈಲುಪಾಲಾಗಿದ್ದಾರೆ. ತನ್ನ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ ಸಲ್ಲಿಸಿದ ಒಂದೆರೆಡು ವಾರಗಳ ನಂತರ ಜಾಮೀನು ಕೋರಿ ದರ್ಶನ್​ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ಸೆ.27ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

ಇಂದು ದರ್ಶನ್​ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್​, ಆರೋಪಿ ಪರ ವಾದಮಂಡನೆಗೆ ಕಾಲಾವಕಾಶ ಕೋರಿದ ವಕೀಲ ಸುನೀಲ್​ ಮನವಿ ಮೇರೆಗೆ ಇದೀಗ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net