'ದಂಗಲ್' ನಟಿ ಸುಹಾನಿ ಭಟ್ನಾಗರ್ ನಿಧನ

Dangal Actress Suhani Bhatnagar Who Played Young Babita Kumari Dies At 19 In Delhi
Published on

ಮುಂಬೈ: ಬಾಲಿವುಡ್ ನ ಯಶಸ್ವಿ ಚಿತ್ರ ದಂಗಲ್ ನಲ್ಲಿ ಬಬಿತಾ ಕುಮಾರಿ ಪಾತ್ರ ನಿರ್ವಹಿಸಿದ್ದ ನಟಿ ಸುಹಾನಿ ಭಟ್ನಾಗರ್ ತಮ್ಮ 19ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 

ಸುಹಾನಿ ಭಟ್ನಾಗರ್ ಫರಿದಾಬಾದ್‌ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟಿಯ ನಿಧನದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಅವರು ದಂಗಲ್ ಚಿತ್ರದಿಂದ ಜನಪ್ರಿಯತೆಯನ್ನು ಗಳಿಸಿದರು ಮತ್ತು ತನ್ನ ಬಬ್ಲಿ ನಟನೆಯಿಂದ ಎಲ್ಲರನ್ನೂ ಆಕರ್ಷಿಸಿದರು.

ಸುಹಾನಿ ಭಟ್ನಾಗರ್ ಕಳೆದ ಕೆಲವು ದಿನಗಳಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲಿನ ಮೂಳೆ ಮುರಿತವಾಗಿತ್ತು. ಅದರ ಚಿಕಿತ್ಸೆಗಾಗಿ ಔಷಧಗಳನ್ನೂ ತೆಗೆದುಕೊಳ್ಳುತ್ತಿದ್ದಳು. ಆದರೆ ಔಷಧಿಗಳ  ಅಡ್ಡ ಪರಿಣಾಮದಿಂದ  ಕಾಲುಗಳು ನೀರಿನಿಂದ ತುಂಬಿವೆ. ಚಿಕಿತ್ಸೆ ಫಲಕಾರಿಯಾಗದೆ ಸುಹಾನಿ ಸಾವನ್ನಪ್ಪಿದ್ದಾಳೆ. ನಟಿಯ ಅಂತಿಮ ಸಂಸ್ಕಾರವನ್ನು ಫರಿದಾಬಾದ್‌ನ ಸೆಕ್ಟರ್ 15 ನಲ್ಲಿರುವ ಅಜ್ರೌಂಡಾ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ.

ಸುಹಾನಿ ಭಟ್ನಾಗರ್ 11 ನೇ ವಯಸ್ಸಿನಲ್ಲಿಯೆ ಸಿನಿಮಾ ಇಂಟಸ್ಟ್ರೀಗೆ ಕಾಲಿಟ್ಟಳು. ಅಮೀರ್ ಖಾನ್ ಅವರ ದಂಗಲ್ ಚಿತ್ರದಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ಕಾಣಿಸಿಕೊಂಡಳು. ಈ ಪಾತ್ರದಲ್ಲಿ ಅವರು ತುಂಬಾ ಇಷ್ಟಪಟ್ಟಿದ್ದರು.  ಟಿಯ ನಿಧನದಿಂದ ಎಲ್ಲರೂ ಶಾಕ್ ಆಗಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net