ಸಭೆಯಲ್ಲಿ ನೆಲದ ಮೇಲೆಯೇ ಕೂರಬೇಕು ಈ ಗ್ರಾಪಂ ಅಧ್ಯಕ್ಷೆ; ಉಪಾಧ್ಯಕ್ಷನಿಂದ 'ಜಾತಿ' ದೌರ್ಜನ್ಯ

President 10 OCt
Published on

ಚೆನ್ನೈ: ಈ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಆದರೆ ವಿಚಿತ್ರ ಎಂದರೆ ಯಾವುದೇ ಸಭೆ ನಡೆಯಲಿ ಅವರು ನೆಲದ ಮೇಲೆ ಒಂದು ಬದಿಗೆ ಕೂರಬೇಕು..ಉಳಿದ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರೆಲ್ಲ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಇದಕ್ಕೆ ಕಾರಣ ಆಕೆಯ ಜಾತಿ !

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬ ವೈರಲ್​ ಆಗುತ್ತಿದೆ. ಅದರಲ್ಲಿ ಮಹಿಳೆಯೋರ್ವಳು ನೆಲದ ಮೇಲೆ ಕುಳಿತಿದ್ದರೆ, ಮತ್ತೊಂದಷ್ಟು ಜನ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಬಹುದು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತ ಮಹಿಳೆ ಎಂಬ ಕಾರಣಕ್ಕೆ ಹೀಗೆ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.

ತಮಿಳುನಾಡಿನ ಕಡಲೋರ್​​ನ ಥರ್ಕು ತಿಟ್ಟೈ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಈ ಗ್ರಾಪಂ ಅಧ್ಯಕ್ಷೆ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರು. ಇದೊಂದು ಪರಿಶಿಷ್ಟ ಜಾತಿ. ಮೀಸಲಾತಿ ಆಧಾರದ ಮೇಲೆ ಕಳೆದ ವರ್ಷವಷ್ಟೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಅಕ್ಟೋಬರ್​ 16ಕ್ಕೆ ಚಿರು ಅಭಿನಯದ ‘ಶಿವಾರ್ಜುನ’ ಮರುಬಿಡುಗಡೆ

ತನಗೆ ಆಗುತ್ತಿರುವ ಕಿರುಕುಳದ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ನಾನು ಎಸ್​ಸಿ ಎಂಬ ಕಾರಣಕ್ಕೆ ಗ್ರಾಪಂ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲು ನನಗೆ ಬಿಡುವುದಿಲ್ಲ. ಧ್ವಜಾರೋಹಣ ಮಾಡಲೂ ಬಿಡುವುದಿಲ್ಲ. ಇದಕ್ಕೆಲ್ಲ ತನ್ನ ತಂದೆಯನ್ನು ಕರೆಸುತ್ತಾರೆ. ಅಧ್ಯಕ್ಷೆಯಾಗಿ ನೇಮಕಗೊಂಡಾಗಿನಿಂದಲೂ ಮೇಲ್ವರ್ಗದವರೊಂದಿಗೆ ಹೊಂದಿಕೊಂಡೇ ಬರುತ್ತಿದ್ದೇನೆ. ಆದರೆ ಇತ್ತೀಚೆಗೆ ಅತಿರೇಕಕ್ಕೆ ಹೋಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.  ಇದನ್ನೂ ಓದಿ: 12ರಂದು ಹೈಕೋರ್ಟ್​ಗೆ ಹಾಜರಾಗಬೇಕಿದೆ ಹಾಥರಸ್ ಸಂತ್ರಸ್ತೆಯ ಕುಟುಂಬ

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಚಂದ್ರಶೇಖರ್​ ಚಂದ್ರ ಶೇಖರ್ ಸಖಾಮುರಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ ನೋಡಿ ನಾವೂ ಕೂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆದಷ್ಟು ಶೀಘ್ರವೇ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ. ಅದಾಗಲೇ, ಗ್ರಾಪಂ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದ್ದು, ಉಪಾಧ್ಯಕ್ಷನಿಗೆ ಶೋಕಾಸ್ ನೋಟಿಸ್​ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net