ಘನ ತ್ಯಾಜ್ಯ ಸಂಸ್ಕರಣಾ ಟಕಕ್ಕೆ ತುಳಸಿ ಮದ್ದಿನೇನಿ ಭೇಟಿ

New Project
Published on

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೋಮವಾರ ಭೇಟಿ ನೀಡಿದರು.

ಹಸಿ ತ್ಯಾಜ್ಯದಿಂದ ತಯಾರಿಸಿರುವ ಗೊಬ್ಬರ, ಹಸಿ ತ್ಯಾಜ್ಯದಿಂದ ತಯಾರಿಸಲು ಉದ್ದೇಶಿಸಿರುವ ಬಯೋಗ್ಯಾಸ್ ತಯಾರಿ ಟಕ ಮತ್ತು ಒಣ ತ್ಯಾಜ್ಯದಿಂದ ಮರುಬಳಕೆ, ಮರು ಉಪಯೋಗಕ್ಕೆ ಯೋಗ್ಯವಾದ ವಸ್ತುಗಳನ್ನು ವಿಂಗಡಿಸಿ ಸಂಗ್ರಹಿಸಿಡುವುದು, ಆರ್‌ಡಿಎಫ್ ಸಿಮೆಂಟ್ ಕಾರ್ಖಾನೆಗೆ ಕಳುಹಿಸಲು ಸಂಗ್ರಹಿಸಿರುವುದನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಎಂ.ಡಿ. ರಾಜು ಕೆ., ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಮುದಾಯ ಸಂಟಕಿ ಉವಾವತಿ, ಪುರಸಭೆಯ ಒಣತ್ಯಾಜ್ಯ ನಿರ್ವಹಣೆಯ ಅಭಿಲಾಷ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net