ಯುವಜನತೆ ಹೈನುಗಾರಿಕೆಯತ್ತ ಮುಖ ಮಾಡಲಿ

milk
ಚೆಗ್ರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಮಂಗಳೂರು ಉಪವ್ಯವಸ್ಥಾಪಕ ಶಂಕರ ನಾಯಕ್ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ದ.ಕ. ಹಾಲು ಒಕ್ಕೂಟ ಮಂಗಳೂರು ಇಲ್ಲಿ ಪ್ರತಿನಿತ್ಯ 5,40,000 ಲೀ. ಹಾಲಿಗೆ ಬೇಡಿಕೆ ಇದ್ದು, ಪ್ರತಿನಿತ್ಯ ಹೈನುಗಾರರು 3,90,000 ಲೀ. ಹಾಲು ಪೂರೈಸುತ್ತಿದ್ದಾರೆ. ಉಳಿದ ಹಾಲನ್ನು ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಂಡು ಮಾರಾಟ ಮಾಡಬೇಕಿದೆ. ಇಂದಿನ ಯುವಜನತೆ ಹೈನುಗಾರಿಕೆಯತ್ತ ಒಲವು ತೋರಬೇಕು ಎಂದು ದ.ಕ. ಹಾಲು ಒಕ್ಕೂಟ ಮಂಗಳೂರು ಉಪವ್ಯವಸ್ಥಾಪಕ ಶಂಕರ ನಾಯಕ್ ಹೇಳಿದರು.
ಚೆಗ್ರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ವಾರ್ಷಿಕ ಸಾಮಾನ್ಯ ಸಭೆ ಶುಕ್ರವಾರ ಸಂಘದ ಅಧ್ಯಕ್ಷ ನಾಗರಾಜ ಉಳಿತ್ತಾಯ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು.

ಸಂಘದ ಉಪಾಧ್ಯಕ್ಷ ಶಂಕರ ನಾಯ್ಕ, ನಿರ್ದೇಶಕರಾದ ರಾಜೀವ ಮರಕಾಲ, ಗೋವಿಂದ ನಾಯ್ಕ, ಯೋಗೀಶ ನಾಯ್ಕ, ಜಗನ್ನಾಥ ಮರಕಾಲ, ಭವಾನಿ ಪೂಜಾರ್ತಿ, ಶಾರದಾ ಪೂಜಾರ್ತಿ, ಬಾಬು ನಾಯ್ಕ, ಇಂದಿರಾ ನಾಯಕ್, ನರಸಿಂದ ನಾಯ್ಕ, ಪದವಿಮಿತ್ತ ನಿರ್ದೇಶಕ (ವಿಸ್ತರಣಾಧಿಕಾರಿ) ಮಂಜುನಾಥ್ ಬಿ., ಸಂಘದ ಸದಸ್ಯರು, ಹೈನುಗಾರರು, ಸಿಬ್ಬಂದಿ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಲಕ್ಷ್ಮಣ ನಾಯಕ್ ಸ್ವಾಗತಿಸಿದರು. ಗಣಕಯಂತ್ರ ನಿರ್ವಾಹಕಿ ವಾಣಿ ನಾಯಕ್ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ರಾಜೀವ ಮರಕಾಲ ವಂದಿಸಿದರು. ಹಾಲು ಪರೀಕ್ಷಕ ರಾಜು ಪೂಜಾರಿ ಸಹಕರಿಸಿದರು.

ಹೈನುಗಾರಿಕೆ ನಡೆಸಲು ಕೆಸಿಸಿ ಯೋಜನೆಯಿಂದ ಹೈನುಗಾರರಿಗೆ ಶೇಕಡಾ 3ರಲ್ಲಿ ಸಾಲ ನೀಡಲಾಗುತ್ತಿದೆ. ಇದನ್ನು ಹೈನುಗಾರರು ಬಳಸಿಕೊಳ್ಳಿ.ಹೈನುಗಾರಿಕೆಯಿಂದ ವಿಮುಖರಾಗಬೇಡಿ. ಹೈನುಗಾರಿಕೆ ಲಾಭದಾಯಕ.-ಮಂಜುನಾಥ ಬಿ. ಪದವಿಮಿತ್ತ ನಿರ್ದೇಶಕರು (ವಿಸ್ತರಣಾಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net