ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ, ತೆರೆಯಲಿದೆ ಅದೃಷ್ಟದ ಬಾಗಿಲು

Nitya Bhavisya Vijayavani
Published on

ಮೇಷ: ಕಚೇರಿಯಲ್ಲಿ ಸಂತಸದ ವಾತಾವರಣ. ಭೂ ವ್ಯವಹಾರಗಳಲ್ಲಿ ಲಾಭ. ಕಾರ್ಯ ಸಾಧನೆಗಾಗಿ ತಿರುಗಾಟ. ಶತ್ರುಗಳ ಬಾಧೆ. ಶುಭಸಂಖ್ಯೆ: 5

ವೃಷಭ: ಹೊಸ ಅವಕಾಶಗಳು ಪ್ರಾಪ್ತಿ. ಅದೃಷ್ಟದ ಬಾಗಿಲು ತೆರೆಯಲಿದೆ. ಮಕ್ಕಳಿಂದ ಸಂತಸ. ಮಗನ ಮದುವೆ ಕಾರ್ಯಕ್ಕಾಗಿ ತಿರುಗಾಟ. ಶುಭಸಂಖ್ಯೆ: 1

ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ವ್ಯಾಪಾರದಿಂದ ಲಾಭ. ಬಂಧುಗಳಿಂದ ಕಿರಿಕಿರಿ. ಗೌರವಕ್ಕೆ ಧಕ್ಕೆ. ನಿಂದನೆಗೆ ಗುರಿಯಾಗುವಿರಿ. ಶುಭಸಂಖ್ಯೆ: 8

ಕಟಕ: ನಿಮ್ಮಲ್ಲಿರುವ ಪ್ರತಿಭೆಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಬಹಳ ಬೇಗ ವಿಷಯ ಗ್ರಹಿಸುವಿರಿ. ನಿರುದ್ಯೋಗಿ ಗಳಿಗೆ ಉದ್ಯೋಗಾವಕಾಶ. ಶುಭಸಂಖ್ಯೆ: 2

ಸಿಂಹ: ಆತ್ಮೀಯರಿಂದ ಸಹಾಯ. ಮಗಳಿಗೆ ವಿವಾಹ ಯೋಗ. ಆಕಸ್ಮಿಕ ಧನ ಲಾಭ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಉತ್ತಮ ಲಾಭ.ಶುಭಸಂಖ್ಯೆ: 7

ಕನ್ಯಾ: ಸಂತಸದ ಕ್ಷಣ. ಭೂ ಲಾಭ. ವಿವಾದಗಳಿಂದ ದೂರವಿರಿ. ವ್ಯವಹಾರಗಳಲ್ಲಿ ತಾಳ್ಮೆ ಅತ್ಯಗತ್ಯ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 4

ತುಲಾ: ಕುಟುಂಬ ಸೌಖ್ಯ. ಸಾಲ ಬಾಧೆ. ಕಾರ್ಯಗಳಲ್ಲಿ ವಿಘ್ನ. ಬಂಧುಗಳಿಂದ ಹಿಂಸೆ. ಕೋರ್ಟ್ ವ್ಯವಹಾರಗಳಲ್ಲಿ ಜಯವಾಗುವುದು. ಶುಭಸಂಖ್ಯೆ: 2

ವೃಶ್ಚಿಕ: ಚಲನಚಿತ್ರ ನಟರಿಗೆ ಮಾನಸಿಕ ಒತ್ತಡ. ವಿದ್ಯೆಯಲ್ಲಿ ನಿರಾಸಕ್ತಿ. ದೃಷ್ಟಿದೋಷದಿಂದ ತೊಂದರೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ಧನುಸ್ಸು: ಇಷ್ಟವಾದ ವಸ್ತುಗಳ ಖರೀದಿ. ಹಿರಿಯರಿಂದ ಬೆಂಬಲ. ವ್ಯರ್ಥ ಧನಹಾನಿ. ಸಕಾಲಕ್ಕೆ ಹಣದ ಸಹಾಯ ಲಭಿಸುವುದಿಲ್ಲ. ಶುಭಸಂಖ್ಯೆ:6

ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ. ಶೀತ ಸಂಬಂಧಿ ರೋಗ. ಆಧ್ಯಾತ್ಮದತ್ತ ಒಲವು. ಶುಭಸಂಖ್ಯೆ:4

ಕುಂಭ: ನಿಮ್ಮ ಮಾತುಗಳಿಂದ ಕಲಹ. ತಾಳ್ಮೆ ಅಗತ್ಯ. ಕಾರ್ಯ ಸಾಧನೆಗಾಗಿ ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡುವಿರಿ. ಆಕಸ್ಮಿಕ ಧನ ಲಾಭ. ಶುಭಸಂಖ್ಯೆ:2

ಮೀನ: ಇತರರಿಗೆ ಸಹಾಯ ಮಾಡುವಿರಿ. ರಿಯಲ್ ಎಸ್ಟೇಟ್​ನವರಿಗೆ ಸ್ನೇಹಿತರಿಂದ ಮೋಸ. ನೂತನ ಪ್ರಯತ್ನಗಳಿಂದ ಯಶಸ್ಸು. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net