

ಮೇಷ: ವೈವಾಹಿಕ ಜೀವನದಲ್ಲಿ ಅಸಮಾಧಾನ. ಅನ್ಯರ ವಿಚಾರಗಳಿಂದ ದೂರವಿರಿ. ಪ್ರಭಾವಿಗಳಿಂದ ಪದವಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ:9
ವೃಷಭ: ಆಂತರ್ಯದ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವಿದ್ಯುತ್ ಕೆಲಸದವರು ಎಚ್ಚರಿಕೆಯಿಂದ ಇರಿ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ:1
ಮಿಥುನ: ಬಂಧುಗಳಿಂದ ಸಹಾಯ. ವಿದೇಶ ಪ್ರಯಾಣ. ಬೆನ್ನು ನೋವು. ವಿದೇಶಯಾನಕ್ಕೆ ಅಡೆತಡೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 6
ಕಟಕ: ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ:4
ಸಿಂಹ: ನಿವೃತ್ತಿ ಹೊಂದಿದವರಿಗೆ ಕಾರ್ಯವಿಘ್ನ. ಉದ್ಯೋಗಸ್ಥ ಮಹಿಳೆಯರಿಗೆ ಸಲ್ಲದ ಅಪವಾದ. ಸಂಗೀತಗಾರರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ:9
ಕನ್ಯಾ: ನಿರೀಕ್ಷೆಯಲ್ಲಿದ್ದ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯ. ಸಿಹಿ ತಿಂಡಿ ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಅಡುಗೆ ಗುತ್ತಿಗೆದಾರರಿಗೆೆ ಲಾಭ. ಶುಭಸಂಖ್ಯೆ: 2
ತುಲಾ: ವ್ಯಾಪಾರದಲ್ಲಿ ನೆಮ್ಮದಿ. ಸ್ಥಿರಾಸ್ತಿಯಿಂದ ಲಾಭವಿದೆ. ರೈತ ಮಿತ್ರರಿಗೆ ಶುಭ ಸಂಪರ್ಕ. ರಾಜಕೀಯ ನಾಯಕರಿಗೆ ಮುನ್ನಡೆ. ಶುಭಸಂಖ್ಯೆ: 3
ವೃಶ್ಚಿಕ: ಕೆಲಸಗಾರರ ಕಾರ್ಯದಲ್ಲಿ ಅಸಮಾಧಾನ. ಬ್ಯಾಂಕ್ ವ್ಯವಹಾರದಲ್ಲಿ ಲಾಭ ಬರುವುದು. ಮೇಲಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ: 7
ಧನುಸ್ಸು: ಮಧುಮೇಹ ರೋಗಿಗಳ ಆರೋಗ್ಯದಲ್ಲಿ ಏರುಪೇರು. ಹಿರಿಯರಿಂದ ಆರ್ಥಿಕ ಲಾಭ. ಕೃಷಿಕ ವಲಯದಲ್ಲಿ ಲಾಭ ಕಡಿಮೆ. ಶುಭಸಂಖ್ಯೆ: 5
ಮಕರ: ಆಪ್ತ ಸಹಾಯಕನ ಕಾರ್ಯದಿಂದ ಅಸಮಾಧಾನ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ. ಶುಭಸಂಖ್ಯೆ: 1
ಕುಂಭ: ಮಗಳ ವಿವಾಹದ ಪ್ರಯತ್ನಕ್ಕೆ ಫಲ ಸಿಗಲಿದೆ. ಮಾನಸಿಕ ಕಿರಿಕಿರಿ ದೂರಾಗಲಿದೆ. ಕೈಗಾರಿಕೆಯಿಂದ ಲಾಭ. ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 7
ಮೀನ: ಸಹೋದ್ಯೋಗಿಗಳ ಜತೆ ಉತ್ತಮ ಬಾಂಧವ್ಯ. ಕುಟುಂಬದೊಂದಿಗೆ ಮಂಗಳ ಕಾರ್ಯದಲ್ಲಿ ಭಾಗಿ. ಕೈಗಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ:9