

ಮೇಷ: ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಜ್ಞಾನಿಯೊಬ್ಬರ ಭೇಟಿಯಿಂದ ಮನೋಲ್ಲಾಸ ಹೊಂದುವ ಅವಕಾಶವೂ ಇದೆ. ಶುಭಸಂಖ್ಯೆ: 5
ವೃಷಭ: ಯುಕ್ತಿಯಿಂದ ಕೂಡಿದ ಮಾತುಕತೆಗಳಿಂದ ಗೆಲ್ಲಲಿದ್ದೀರಿ. ದೈವಶಕ್ತಿಯ ಅಭಯಹಸ್ತವು ನಿಮ್ಮ ಪಾಲಿಗೆ ಇದ್ದೇ ಇರಲಿದೆ. ಶುಭಸಂಖ್ಯೆ: 2
ಮಿಥುನ: ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟಾಗುತ್ತದೆ. ಆದರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ವಿರೋಧಿಗಳ ಶಕ್ತಿ ಕುಗ್ಗಲಿದೆ. ಶುಭಸಂಖ್ಯೆ: 7
ಕಟಕ: ಸಾಮಾಜಿಕ ವಲಯದಲ್ಲಿ ಗೌರವ, ಆದರ ಸಂಪಾದಿಸುವಿರಿ. ದೇವರ ಕೃಪೆಯಿಂದಾಗಿ ಹೊಸ ಕಾರ್ಯಕ್ಕೆ ಚಾಲನೆ ಸಿಗಲಿದೆ. ಶುಭಸಂಖ್ಯೆ: 1
ಸಿಂಹ: ವನವಿಹಾರದಲ್ಲಿ ಪಾಲ್ಗೊಳ್ಳುವಿರಿ. ವಿಶಿಷ್ಟ ಅನುಭವಗಳಿಗೆ ಅವಕಾಶ ದೊರೆಯಲಿದೆ. ಖರ್ಚಿನಲ್ಲಿ ಹಿಡಿತ ಇರಲಿ. ಶುಭಸಂಖ್ಯೆ: 5
ಕನ್ಯಾ: ಕಾಡುಪ್ರಾಣಿಯ ದಾಳಿಯಿಂದ ಆಘಾತವೇ ಆದೀತು. ಲಕ್ಷ್ಮೀನರಸಿಂಹ ಸ್ತೋತ್ರವನ್ನು ಪಠಿಸಿ. ನೆಂಟರ ಬಳಿ ವಾದಿಸಬೇಡಿ. ಶುಭಸಂಖ್ಯೆ: 3
ತುಲಾ: ಮನೋಕ್ಲೇಶಗಳು ಜಾಸ್ತಿಯಾದರೂ ನಿರಾಸೆ ಹೊಂದದೆ ಜನರ ಬಳಿ ಸಹಜವಾಗಿರಿ. ಸಂಜೆ ವಿಷ್ಣು ಸಹಸ್ರನಾಮವನ್ನು ಓದಿ. ಶುಭಸಂಖ್ಯೆ: 9
ವೃಶ್ಚಿಕ: ಮನೆಯಲ್ಲಿ ಸಡಗರ ಇರಲಿದೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಅಲರ್ಜಿಯಿದ್ದವರು ಎಚ್ಚರಿಕೆಯನ್ನು ವಹಿಸಬೇಕು. ಶುಭಸಂಖ್ಯೆ: 6
ಧನುಸ್ಸು: ವೃತ್ತಿರಂಗದಲ್ಲಿ ಮನ್ನಣೆ ದೊರಕಿದರೂ ಅಪರಿಚಿತರನ್ನು ನಂಬುವುದು ಸರಿಯಲ್ಲ. ದುರ್ಗಾಧ್ಯಾನದಿಂದ ಕ್ಷೇಮ. ಶುಭಸಂಖ್ಯೆ: 4
ಮಕರ: ಹಳೆಯ ಸಮಸ್ಯೆಗಳು ಪರಿಹಾರವಾಗಲಿವೆ. ಲಾಭದ ಪ್ರಮಾಣ ಕುಸಿದರೂ ನಷ್ಟವಾಗದ ಕಾರಣ ಸಮಾಧಾನದಿಂದಿರಿ. ಶುಭಸಂಖ್ಯೆ: 8
ಕುಂಭ: ಛಲ ಬಿಡದ ಸ್ವಭಾವದಿಂದ ಸಫಲತೆಯನ್ನು ಪಡೆಯುವಿರಿ. ಸಂಗಾತಿಯೂ ನೆರವಾಗಲಿದ್ದಾರೆ. ಹಳೆಯ ಆಸ್ತಿ ದೊರೆಯಲಿದೆ. ಶುಭಸಂಖ್ಯೆ: 2
ಮೀನ: ವೃತ್ತಿಜೀವನದಲ್ಲಿ ಸಮಾಧಾನ ಉಂಟಾಗಲಿದೆ. ಆತ್ಮೀಯರು ಸಹಕರಿಸಲಿದ್ದಾರೆ. ಆಹಾರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಶುಭಸಂಖ್ಯೆ: 7