ಅಪ್ಪು ಸಮಾಧಿ ದರ್ಶನಕ್ಕೆಂದು 160 ಕಿ.ಮಿ ಸೈಕಲ್ ಯಾತ್ರೆ ಮಾಡಿದ ಅಭಿಮಾನಿಗಳು! ಫೋಟೋ ವೈರಲ್!

Published on

ಮೈಸೂರು: ಅಪ್ಪು ನಿಧನದ ಬಳಿಕ ಪವರ್ ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಪುನೀತ್ ಸಮಾಧಿ ದರ್ಶನ ಪಡೆಯಲು ಹಲವರು ತುಂಬಾ ಯಾತ್ರೆಗಳನ್ನು ಕೈಗೊಂಡರು. ಇದೀಗ, ಪುನೀತ್ ಅವರ ಮೈಸೂರಿನ ಅಭಿಮಾನಿಗಳು ಮೈಸೂರಿನಿಂದ ಅಪ್ಪು ಸಮಾಧಿಯವೆರೆಗೆ ಮತ್ತೊಂದು ಸೈಕಲ್ ಯಾತ್ರೆ ಮಾಡಿದ್ದು ಈ ಸಂಬಂಧ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಮೈಸೂರಿನಿಂದ ಬೆಂಗಳೂರಿಗೆ ಅಭಿಮಾನಿಗಳು ಸೈಕಲ್ ಯಾತ್ರೆ ಮಾಡಿದ್ದು ಡಿ.6 ರಂದು ಸಂಜೆ ಅಪ್ಪು ಸಮಾಧಿ ತುಲಿಪಿದ್ದಾರೆ. ನವೀನ್ ಕುಮಾರ್, ಶಿವು, ಸುರೇಶ್, ರಾಘವ್, ಭೀಮರಾಜ್, ಸುನೀಲ್, ಯುವರಾಜ್ ಎಂಬವರು ಪುನೀತ್ ಸ್ಮರಣೆಗೆ ಸೈಕಲ್ ಯಾತ್ರೆ ಕೈಗೊಂಡರು. ಈ 160 ಕಿ.ಮಿ ಸೈಕಲ್ ಯಾತ್ರೆಗೆ ಭೇಷ್ ಎಂದು ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸೈಕಲ್ ಯಾತ್ರೆಯಲ್ಲಿ ಭಾಗವಹಿಸಿದವರಿಗೆ ಸ್ವಾಗತಿಸಿ ಸನ್ಮಾನಿಸಿದರು.

ಸೈಕಲ್ ಯಾತ್ರಿಗಳು ಚನ್ನಪಟ್ಟಣ ಮಾರ್ಗವಾಗಿ ರಾಮನಗರ, ಬಿಡದಿ ಮೂಲಕ ಬೆಂಗಳೂರು ತಲುಪಿದರು. ಯಾತ್ರೆ ಮುಗಿಸಿ ಮಾತಾಡಿದ ಅಭಿಮಾನಿಗಳು, '1800ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಹೊಣೆ ಹೊತ್ತಿದ್ದ ಪುನೀತ್ ತಮ್ಮ ಅಭಿಮಾನಿಗಳ ಅಂತರಾಳದಲ್ಲಿ ಚಿರಸ್ಥಾಯಿ', ಎಂದು ಹೇಳುತ್ತಾ ಭಾವುಕರಾದರು. ರಾಜ್ಯ, ದೇಶ ಮತ್ತು ಬೇರೆ ದೇಶಗಳಲ್ಲೂ ಅಪ್ಪು ನೆನಪಿಗೆಂದು ಹೀಗೆ ಅವರ ಅಭಿಮಾನಿಗಳು ಒಂದಲ್ಲಾ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೆ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net