VIDEO |'ನನ್ನ ಗಂಡ ಯಾರು? ಎಲ್ಲಿಯೂ ಕಾಣುತ್ತಿಲ್ಲ..' ಎಂದು ಕಣ್ಣೀರಿಟ್ಟ ಬಾಲಕಿ!

littlegirl
Published on

ನವದೆಹಲಿ: ಕೆಲವೊಮ್ಮೆ ಮಕ್ಕಳ ಚೇಷ್ಟೆಗಳು ನಮ್ಮನ್ನು ಜೋರಾಗಿ ನಗಿಸುತ್ತದೆ. ಇತ್ತೀಚೆಗೆ ಬಾಲಕಿಯೊಬ್ಬಳು ನನ್ನ ಗಂಡ ಕಾಣುತ್ತಿಲ್ಲವೇ..? ಎಂದು ಮುದ್ದಾದ ಬಾಲಕಿ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?: ಬಾಲಕಿ ಬಳಿ ತಾಯಿ ಬಂದು ಯಾಕೆ ಅಳುತ್ತಿದ್ದಿಯಾ ಎಂದು ಕೇಳಿದ್ದಾಳೆ. ಈಗ ನನ್ನ ಗಂಡ ಎಲ್ಲೋ ಹೋಗಿದ್ದಾನೆ.. ಎಲ್ಲಿಯೂ ಕಾಣುತ್ತಿಲ್ಲ' ಎಂದು ಜೋರಾಗಿ ಅಳುತ್ತಾಳೆ. ಮಗುವಿನ ತಾಯಿ ಸಾಂತ್ವನ ಹೇಳಲು ಪ್ರಯತ್ನಿಸುತ್ತಾಳೆ.. ಬೇಟಾ ನಿನಗೆ ಇನ್ನೂ ಗಂಡ ಸಿಕ್ಕಿಲ್ಲ. ದೊಡ್ಡವನಾದ ಮೇಲೆ ಬರುತ್ತಾನೆ. ಅಪ್ಪ ನನ್ನ ಪತಿ..ಮಾವ ಅತ್ತೆಯ ಪತಿ ಚಿಕ್ಕ ಮಕ್ಕಳಿಗೆ ಕಿರಿಯ ಸಹೋದರಿಯರು, ಕಿರಿಯ ಸಹೋದರರು ಇರುತ್ತಾರೆ ಎಂದು ಹೇಳಿ ಸಮಾಧಾನ ಪಡಿಸಿದ್ದಾಳೆ. ಆದರೆ ಬಾಲಕಿ ಮಾತ್ರ ನನ್ನ ಪತಿ ಎಲ್ಲಿ ಹೋಗಿದ್ದಾನೆಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಮಗುವಿನ ಮಾತಿಗೆ ಸುತ್ತಮುತ್ತಲಿದ್ದವರು ನಗೆಗಡಲಲ್ಲಿ ತೇಲುತ್ತಿದ್ದಾರೆ. ಈ ವಿಚಿತ್ರ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ, ಆದರೆ ಪತಿ ಕಾಣೆಯಾಗಿದ್ದಾರೆ ಎಂದು ಈ ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಕ್ಷಾಂತರ ವೀಕ್ಷಣೆಗಳು, ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬರುತ್ತಿವೆ. ತಮ್ಮ ಮಕ್ಕಳೂ ಮದುವೆ ಕಾರ್ಯಕ್ರಮಕ್ಕೆ ಹೋದರೆ ನಾನು ಮದುವೆ ಆಗುತ್ತೆನೆಂದು ಹೇಳುವುದು ಸಹಜವಾಗಿದೆ ಎಂದು ಹಲವರು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net