

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಸೀಲ್ ಮಾಡಿದ ಬಿಯರ್ ಬಾಟಲಿಯಲ್ಲಿ ಫಂಗಸ್ ಕಂಡು ಬಂದಿರರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಿಯರ್ ಬಾಟಲಿಯಲ್ಲಿ ಫಂಗಸ್ ಕಾಣಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವ್ಯಕ್ತಿ ದೂಷಿಸಿದ್ದು, ಇದರ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.
ಹನುಮಕೊಂಡದಲ್ಲಿ ವ್ಯಕ್ತಿಯೊಬ್ಬರು ಜುಲೈ 30ರಂದು ಸರ್ಕಾರಿ ಸ್ವಾಮ್ಯದ ಬಾರೊಂದಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರು ಕಿಂಗ್ಫಿಶರ್ ಬಿಯರ್ಅನ್ನು ಖರೀದಿಸಿದ್ದಾರೆ. ಬಿಯರ್ ಓಪನ್ ಮಾಡುವುದಕ್ಕೂ ಮುನ್ನ ಅವರು ಬಾಟಲ್ಅನ್ನು ಪರಿಶೀಲಿಸಿದ್ದು, ಈ ವೇಳೆ ಅವರು ಬಾಟಲ್ನ ಕೆಲಭಾಗದಲ್ಲಿ ಫಂಗಸ್ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಬಾರ್ ಮಾಲೀಕರ ಬಳಿ ತೆರಳಿದ ವ್ಯಕ್ರಿಯು ಬದಲಿ ನೀಡುವಂತೆ ಆಗ್ರಹಿಸಿದ್ದಾರೆ.
ಬಿಯರ್ಅನ್ನು ವಾಪಸ್ ಪಡೆದ ಬಾರ್ ಮಾಲೀಕ ಬದಲಿ ನೀಡಲು ನಿರಾಕರಿಸಿದ್ದಾನೆ. ಈ ವೇಳೆ ಬಾರ್ನಲ್ಲಿದ್ದ ಇತರರು ಹಾಗೂ ಸ್ಥಳೀಯರು ಗಲಾಟೆ ಮಾಡಿದ್ದು, ಕೂಡಲೇ ಬಾರ್ನ ಮಾಲೀಕ ಕ್ಷಮೆಯಾಚಿಸಿ ಬದಲಿ ಬಿಯರ್ ನೀಡಲು ಒಪ್ಪಿಕೊಂಡಿದ್ದಾನೆ. ಜನರ ಜೀವಕ್ಕೆ ಅಪಾಯವಿದ್ದು, ಇದನ್ನು ಕುಡಿದು ಜನರು ಸಾಯಬೇಕೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ಈ ಘಟನೆಗೆ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮುಖ್ಯ ಕಾರಣ ಎಂದು ಆರೋಪಿಸಿದ ವ್ಯಕ್ತಿಯು, ಕಾಂಗ್ರೆಸ್ ಇಷ್ಟೊಂದು ಬೇಜವಾಬ್ದಾರಿಯಿಂದ ಹೇಗೆ ನಡೆದುಕೊಳ್ಳು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲಂಗಾಣದ ರಾಜ್ಯ ಸರ್ಕಾರಿ ಸ್ವಾಮ್ಯದ ವೈನ್ ಶಾಪ್‌ಗಳಲ್ಲಿ ನೀಡಲಾಗುತ್ತಿರುವ ಮದ್ಯದ ಗುಣಮಟ್ಟದ ಬಗ್ಗೆ ಈ ಘಟನೆ ಆತಂಕ ಮೂಡಿಸಿದೆ. ರಾಜ್ಯದ ಜನರಿಗೆ ನೀಡುತ್ತಿರುವ ಮದ್ಯದ ಗುಣಮಟ್ಟವನ್ನು ಪರಿಶೀಲಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ತೆಲಂಗಾಣ ರಾಜ್ಯ ಪಾನೀಯಗಳ ಕಾರ್ಪೊರೇಷನ್ ಲಿಮಿಟೆಡ್ (TSBCL) ವೈನ್ ಶಾಪ್‌ಗಳನ್ನು ನಡೆಸುತ್ತಿದೆ. ಆದರೆ, ಈ ಘಟನೆಯು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.