ರಾಜ್ಯದಲ್ಲಿ ಇಂದು ಕರೊನಾ ಸೋಂಕಿತರಿಗಿಂತ ಗುಣವಾದವರ ಸಂಖ್ಯೆ ದುಪ್ಪಟ್ಟಿಗೂ ಅಧಿಕ!

Corona
Published on

ಬೆಂಗಳೂರು: ಕರೊನಾ ಹಾವಳಿ ಹೇಳುವಷ್ಟರ ಮಟ್ಟಿಗೆ ಕಡಿಮೆಯಾಗದಿದ್ದರೂ ಇಂದಿನ ಕರೊನಾ ಬುಲೆಟಿನ್​ ಆಶಾದಾಯಕವಾಗಿ ಕಾಣಿಸಿದೆ. ಇಂದಿನ ಬುಲೆಟಿನ್​ ಪ್ರಕಾರ ಸೋಂಕಿತರಿಗಿಂತ ಸೋಂಕಿನಿಂದ ಗುಣವಾದವರ ಕೈಯೇ ಮೇಲಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 25,311 ಕೋವಿಡ್​-19 ಪ್ರಕರಣಗಳು ದೃಢಪಟ್ಟಿದ್ದರೂ ಇದರ ದುಪ್ಪಟ್ಟಿಗೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅಂದರೆ ಇಂದು ರಾಜ್ಯದಲ್ಲಿ ಆಸ್ಪತ್ರೆ-ಕೋವಿಡ್​ ಕೇರ್​ ಸೆಂಟರ್​ಗಳಿಂದ ಬಿಡುಗಡೆ ಆದವರ ಸಂಖ್ಯೆ 57,333 ಆಗಿದೆ. ಈ ಮೂಲಕ ಸೋಂಕಿತರ ಇದುವರೆಗಿನ ಒಟ್ಟು ಸಂಖ್ಯೆ 24,50,215 ಆಗಿದ್ದು, ಗುಣವಾದವರ ಒಟ್ಟು ಸಂಖ್ಯೆ 19,83,948ಕ್ಕೆ ತಲುಪಿದೆ.

ಆದರೆ ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,40,435 ಇದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 529 ಮಂದಿ ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕರೊನಾಗೆ ಬಲಿಯಾದವರ ಇದುವರೆಗಿನ ಒಟ್ಟು ಸಂಖ್ಯೆ 25,811ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net