ಬದಿಯಡ್ಕ: ಅಣಂಗೂರಿನಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮತ್ತು ಕಾಸರಗೋಡು ಜಿಲ್ಲಾ ನವಜೀವನ ಸಮಿತಿಯ ನೇತೃತ್ವದಲ್ಲಿ ನಡೆದ 1930ನೇ ಮಧ್ಯವರ್ಜನ ಶಿಬಿರದಲ್ಲಿ ಕಾಸರಗೋಡಿನ ಗಡಿನಾಡ ಸಾಂಸ್ಕತಿಕ ಕಲಾ ವೇದಿಕೆಯ ಸಾಂಸ್ಕೃತಿಕ ಸಂಭ್ರಮವು ಜನಮನ ಗೆದ್ದಿತು.
ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಹಂಶಿತ್ ಆಳ್ವ, ಶ್ವೇತಾ ಹೊಳ್ಳ, ಸಾನ್ವಿ ಆರ್.ರೈ, ಉಷಾ ಸುಧಾಕರನ್, ರೇಖಾ ಪ್ರಮೋದ್, ಸಾತ್ವಿಕಾ ಎಸ್.ಕೆ., ಜಯಪ್ರಭಾ ವೈ., ಆರಾಧ್ಯಾ ಎಸ್.ಆಳ್ವ, ಪ್ರಮೀಳಾ ಕೆ., ಭುವಿ ಸಜೀಪ, ಹೃತಿಕಾ, ಆಧ್ಯಾ, ಸಾಯಿ ಪ್ರಣಮ್ಯ, ಇಶಾನ್ ಆರ್.ಶೆಟ್ಟಿ, ಧಕ್ಷ್ ಎಂ.ಶೆಟ್ಟಿ, ಯುಕ್ತ್ ಎಂ.ಶೆಟ್ಟಿ, ಶ್ರೀತಿಕ್ ಎಸ್.ಕೆ., ಸನುಷಾ ಸುಧಾಕರನ್, ಭಾನ್ವಿ ಕುಲಾಲ್, ಆಹಾನ್ ಎಸ್.ಆಳ್ವ ಪಾಲ್ಗೊಂಡಿದ್ದರು.
ಗುರುರಾಜ್ ಕಾಸರಗೋಡು ಅವರನ್ನು ಗೌರವಿಸಲಾಯಿತು. ಕಾಸರಗೋಡು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಖಿಲೇಶ್ ನಗುಮುಗಂ, ಯೋಜನಾಧಿಕಾರಿ ದೇವಿಪ್ರಸಾದ್, ವ್ಯವಸ್ಥಾಪನಾ ಅಧ್ಯಕ್ಷ ಉದಯ್ ಕುಮಾರ್, ಕೆ.ಆರ್.ಅಶೋಕ್, ಹಿತೇಶ್, ಉಡುಪಿಯ ಪ್ರಾದೇಶಿಕ ಯೋಜನಾ ಅಧಿಕಾರಿ ಗಣೇಶ್, ನೇತ್ರಾವತಿ ಹಾಗೂ ಗಣೇಶ್ ಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.