

ಪುತ್ತೂರು ಗ್ರಾಮಾಂತರ: ಕಲೆಯನ್ನು ಕರಗತ ಮಾಡಿಕೊಳ್ಳಲು ಕಠಿಣ ಅಭ್ಯಾಸ ಬಹಳ ಮುಖ್ಯ ಎಂದು ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ. ಈಶ್ವರಮಂಗಲ ಹೇಳಿದರು.
ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಕಲಾ ಕೇಂದ್ರದ ವತಿಯಿಂದ ಹಿಮ್ಮೇಳ ವಿದ್ಯಾರ್ಥಿಗಳ ರಂಗಪ್ರವೇಶ ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನೆಗೈದರು. ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ ಅಧ್ಯಕ್ಷತೆ ವಹಿಸಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಸಂಯೋಜಕ ಪ್ರವೀಣ್ ಕುಮಾರ್ ಕರ್ನೂರು ಅವರನ್ನು ಗೌರವಿಸಲಾಯಿತು. ಪಂಚಲಿಂಗೇಶ್ವರ ಕಲಾ ಕೇಂದ್ರದ ಸದಸ್ಯರಾದ ವಿದ್ಯಾಪ್ರಭಾ ಮಂಜುನಾಥ ರೈ, ಅನಿತಾ ಜನಾದರ್ನ ಆಲ್ಚಾರ್, ಚಿತ್ರಾವತಿ ಉಮೇಶ್ ವೈ. ಏತಡ್ಕ, ಗಾಯತ್ರಿ ಚಂದ್ರಶೇಖರ ಗೌಡ ಈಶ್ವರಮಂಗಲ, ಮಹಿತಾ ಸುರೇಶ್ ರೈ, ಸವಿತಾ ಜಗನ್ಮೋಹನ್ ಶೆಟ್ಟಿ, ಪ್ರೇಮಲತಾ ಮೋಹನ್, ಲೋಕೇಶ್ವರಿ ಕೇಶವ, ರಾಜೀವಿ ಭಂಡಾರಿ, ಗೀತಾ ಬಾಲಕೃಷ್ಣ ಎಂ., ಜಯಲತಾ ದೇವಿಪ್ರಕಾಶ್ ಶೆಟ್ಟಿ, ಮಂಜುಳಾ ರಾವೇಂದ್ರ ಆಚಾರ್ಯ, ಶಾರದಾ ಮಾಧವ ಆಚಾರ್ಯ ಮತ್ತಿತರರಿದ್ದರು. ದೇವಿಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಜನಾರ್ದನ ಅಲ್ಚಾರ್ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ರಮೇಶ್ ಶಿರ್ಲಾಲ್ ನಿರೂಪಿಸಿದರು. ಮಹಿತಾ ಸುರೇಶ್ ರೈ ವಂದಿಸಿದರು
ಹಿಮ್ಮೇಳ ಕಲಿತವರಿಂದ ರಂಗಪ್ರವೇಶ
ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ, ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ ಮರ್ಕಂಜ, ಹಿಮ್ಮೇಳ ವಾದನ ಗುರುಗಳಾದ ಶ್ರೀಧರ್ ವಿಟ್ಲ ಮತ್ತು ಲವಕುಮಾರ್ ಐಲ, ದೇವರಾಜ ಆಚಾರ್ಯ ಐಕಳ ಉಪಸ್ಥಿತಿಯಲ್ಲಿ ಹಿಮ್ಮೇಳ ಕಲಿತ ವಿದ್ಯಾರ್ಥಿಗಳಾದ ಅನ್ವಿತ್, ವೇದಾಂಶ, ಸ್ವರೂಪ್, ಸಹಜ್, ವಿದಿತ್, ಗಣತ್, ಆಶಿಶ್, ಆದಿಶ್ ಎ.ಜೆ., ಗೌರೀಶ್, ತುಷಾರ್, ಸಾಧ್ವಿನ್, ಸಾತ್ವಿಕ್, ಅಮತ್, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಸಮ್ಮುಖದಲ್ಲಿ ರಂಗ ಪ್ರವೇಶ ಮಾಡಿದರು.