

ಕಿನ್ನಿಗೋಳಿ: ಕಿನ್ನಿಗೋಳಿ ಸೇಂಟ್ ಮೇರಿಸ್ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿ ಕಿನ್ನಿಗೋಳಿ ಶಾಖೆ ವತಿಯಿಂದ ಮಕ್ಕಳಿಗೆ ಉಡುಗೊರೆ ನೀಡಿ, ಸಿಹಿತಿಂಡಿ ವಿತರಿಸಲಾಯಿತು. ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿ ಜಯಶಂಕರ್, ಮೂಲ್ಕಿ ಠಾಣೆ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್., ಎ.ಎಸ್.ಐ ಹರಿಶೇಖರ್, ಶಾಲಾ ಸಂಚಾಲಕ ಫಾ.ಜೋಕಿಂ ಫರ್ನಾಂಡಿಸ್, ಮಿಲಾಗ್ರಿಸ್ ಸೊಸೈಟಿ ಕಿನ್ನಿಗೋಳಿ ಬ್ರಾಂಚ್ ಮ್ಯಾನೇಜರ್ ಮನಿಷಾ ರೈ, ಲಿಯೋ ಮಾಸ್ಕರಿನಸ್, ಹಿಲ್ಡಾ ಡಿಸೋಜ, ಶಾಲಾ ಪಾಲನ ಸಮಿತಿ ಉಪಾಧ್ಯಕ್ಷ ಗುರುರಾಜ ಭಟ್, ಕಾರ್ಯದರ್ಶಿ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಚರ್ಚ್ ಉಪಾಧ್ಯಕ್ಷ ವಿಲಿಯಂ ಡಿಸೋಜ, ಕಿನ್ನಿಗೋಳಿ ಚರ್ಚ್ ಕಾರ್ಯದರ್ಶಿ ಮೈಕಲ್ ಪಿಂಟೋ, ಜೋಸೆಫ್ ಕ್ವಾಡ್ರಸ್ ಜೊರೋಮ್ ಮೊರಸ್ ಉಪಸ್ಥಿತರಿದ್ದರು.