ಪುರುಷರಕಟ್ಟೆಯಲ್ಲಿ ಸಾಂಸ್ಕೃತಿಕ ಸಂಭ್ರಮ

New Project (2)
Published on

ಬದಿಯಡ್ಕ: ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸದಸ್ಯರಿಂದ ಪುರುಷರಕಟ್ಟೆಯ ಶ್ರೀ ಗಣೇಶೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮನು ಕುಮಾರ್ ಶಿವಮಣಿ ಕಲಾ ಸಂಘ ನೇತೃತ್ವದಲ್ಲಿ ಹಾಗೂ ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸಕ್ಕತಿಕ ಸಂಸ್ಥೆ ಸಹಯೋಗದಲ್ಲಿ ಸಾಂಸ್ಕೃತಿಕ ಸಂಭ್ರಮ ನಡೆಯಿತು.

ಕಲಾವಿದರಿಗೆ ಬೆಂಗಳೂರಿನ ಕೆ.ವಿ.ಲಕ್ಷ್ಮಣಮೂರ್ತಿ ಅವರ ರಾಣಿ ಅಬ್ಬಕ್ಕ ದೇವಿಯ ವಾಹಿತಿಯ ಕೃತಿಯನ್ನು ನೀಡಿ ಗೌರವಿಸಲಾಯಿತು. ಮಧುಲತಾ ಪುತ್ತೂರು, ಪ್ರಥಮ್ಯ ನೆಲ್ಯಾಡಿ, ನಿಶಿತ್ ಉಪ್ಪಿನಂಗಡಿ, ಲಿಖಿತಾ ಭಂಡಾರಿ, ಲೇಖನ್ ಗೌಡ, ಕೃತ್ವಿಕ್, ತೀರ್ಥನ್ ಶೇವಿರೆ, ನಂದನ್, ದಕ್ಷ ಗೌಡ, ಗೌತಮ್, ಹೇಮಂತ್, ರಿತ್ವನ್, ಷಣ್ಮುಖ, ಲಕ್ಷ್ಮೀ, ಸುಜಾತಾ, ಅಚ್ಯುತ ಭಟ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net