More

    ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮರಿ ಚೀತಾ ಮೃತ್ಯು; 2 ತಿಂಗಳಲ್ಲಿ ನಾಲ್ಕನೇ ಸಾವು

    ಮಧ್ಯಪ್ರದೇಶದ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಮರಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

    ಕುನೋ ಅರಣ್ಯಾಧಿಕಾರಿ ಪ್ರಕಾರ, ಮಾರ್ಚ್ 24ರಂದು ಕುನೊದಲ್ಲಿ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೇಲ್ವಿಚಾರಣೆಯ ಸಮಯದಲ್ಲಿ ಜ್ವಾಲಾ ಎಂಬ ಹೆಣ್ಣು ಮರಿ ಮೃತಪಟ್ಟಿರುವುದು ಗೊತ್ತಾಗಿದೆ. ಆದರೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನವಜಾತ ಮರಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅರಣ್ಯ ಇಲಾಖೆ ತಂಡ ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್​ ಅಧ್ಯಕ್ಷರಾಗಿ ಕನ್ನಡಿಗ ಗೋವಿಂದರಾಜ್​ ಆಯ್ಕೆ

    ಮಾರ್ಚ್‌ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್‌ನಲ್ಲಿ ಉದಯ್ ಎಂಬ ಚೀತಾ ಮರಣಹೊಂದಿತ್ತು. ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಈಗ ಮತ್ತೊಂದು ಚೀತಾ ಮೃತಪಟ್ಟಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ತಿಂಗಳಲ್ಲಿ  ಚೀತಾಗಳು ಸಾವನ್ನಪ್ಪಿದ್ದು, ಈಗ ಒಂದು ಮರಿ ಸಹ ಸಾವನ್ನಪ್ಪಿದೆ. ಇದು ಅಧಿಕಾರಿಗಳಲ್ಲಿ ಆತಂಕವನ್ನುಂಟು ಮಾಡಿದೆ.

    ಸುಡು ಬಿಸಿಲಿನಿಂದ ಮಕ್ಕಳನ್ನು ರಕ್ಷಿಸಲು ಪಾದಗಳಿಗೆ ಪ್ಲಾಸ್ಟಿಕ್ ಸುತ್ತಿದ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts