ಭೀಕರ ಅಪಘಾತ: ಬಾಲಕ ಸೇರಿ ಆರು ಜನರ ದಾರುಣ ಸಾವು; ಹತ್ತು ಮಂದಿಗೆ ಗಂಭೀರ ಗಾಯ

Accident (12)
Published on

ಬೆಂಗಳೂರು: ಭೀಕರ ಅಪಘಾತವೊಂದರಲ್ಲಿ ಬಾಲಕ ಸೇರಿ ಆರು ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕರ್ನಾಟಕದ ಕಲಬುರಗಿಯವರು ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಪೈಕಿ ಒಬ್ಬ 12 ವರ್ಷದ ಬಾಲಕ ಹಾಗೂ ಐವರು ಮಹಿಳೆಯರು.

ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಶಿರವಾಡಿ ಬಳಿ ಕ್ರೂಸರ್ ವಾಹನ ಮತ್ತು ಟ್ಯಾಂಕರ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರಲ್ಲಿ ಹಲವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿಗಳು. ಹತ್ತು ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮಹಾರಾಷ್ಟ್ರದ ತೀರ್ಥಕ್ಷೇತ್ರಗಳ ಪ್ರವಾಸ ಮುಗಿಸಿಕೊಂಡು ಮರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಉಸ್ಮಾನಾಬಾದ್ ಜಿಲ್ಲೆ ಉಮರ್ಗಾ ತಾಲೂಕಿನ ಸಂಗೀತಾ ಗದನ್ ಮಾನೇ (35), ಪುಣೆಯ ಇಂದಾಪುರ ನಿವಾಸಿ ಛಾಯಾ ಹನುಮನವರೆ (46), ಅಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿಗಳಾದ ಲಲಿತಾ ಮಹಾದೇವ್ ಬುಗ್ಗೆ (50), ರೋಹಿಣಿ ಪೂಜಾರಿ (40), ಸಾಯಿನಾಥ್ ಗೋವಿಂದ ಪೂಜಾರಿ (10), ಸಂದ್ರಾಬಾಯಿ(45) ಎಂದು ಗುರುತಿಸಲಾಗಿದೆ. ಅಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net