ಪ್ರಿಯಕರನೊಂದಿಗೆ ಓಡಿ ಹೋಗುವಾಗ ಪತಿಯ ಕೈಗೆ Red Hand ಆಗಿ ಸಿಕ್ಕಿಬಿದ್ದ ಪತ್ನಿ; ಮುಂದೇನಾಯ್ತು ನೀವೇ ನೋಡಿ

Husband Wife
Published on

ಪಟ್ನಾ: ಇತ್ತೀಚಿನ ವರ್ಷಗಳಲ್ಲಿ ನಾವು ನೋಡಿರುವಂತೆ ಮದುವೆಯಾಚೆಗಿನ ಸಂಬಂಧಗಳು ಹೆಚ್ಚು ಸದ್ದು ಮಾಡುತ್ತಿದ್ದು, ವಿವಾಹಿತರು ಮದುವೆಯಾದ ಬಳಿಕವೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿರುವ ಸುದ್ದಿಯನ್ನು ನಾವು ನಿರಂತರವಾಗಿ ಕೇಳುತ್ತಿದ್ದೇವೆ. ಅನೈತಿಕ ಸಂಬಂಧ (illicit Relationship) ಕಾರಣ ಮನೆ ಜಗಳ ಬೀದಿ ರಂಪವಾಗಿ ಕೊಲೆಗಳು ಸಹ ನಡೆದು ಹೋಗಿವೆ. ಇದೀಗ ಅಂತಹದ್ದೆ ಘಟನೆಯೊಂದು ಬಿಹಾರದ ಪಟ್ನಾದಲ್ಲಿ ನಡೆದಿದ್ದು, ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿ ಗಂಡನ ಕೈಗೆ ರೆಡ್​ಹ್ಯಾಂಡ್​ (Red Hand) ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಪಟ್ನಾದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಗಂಡ, ಹಂಡತಿ ಹಾಗೂ ಪ್ರಿಯಕರ ರೈಲು ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.  ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಿಆರ್​ಪಿಎಫ್​ ಯೋಧನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪತ್ನಿ ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಈಕೆ ಪೊಲೀಸ್​ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಕೆ ಕಾಣೆಯಾದ ಬಳಿಕ ಗಂಡ ದೂರು ದಾಖಲಿಸಿ ಆಕೆಯ ಹುಡುಕಾಟದಲ್ಲಿ ನಿರತನಾಗಿದ್ದ. ಅಕ್ಟೋಬರ್​ 31ರಂದು ಆಕೆ ಪಟ್ನಾದ ರೈಲು ನಿಲ್ದಾಣದಲ್ಲಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ ಎಂಬ ವಿಚಾರ ತಿಳಿದ ಆಕೆಯ ಪತಿ ಕೂಡಲೇ ರೈಲ್ವೇ ಸ್ಟೇಷನ್​ಗೆ ತೆರಳಿದ್ದು, ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಆಕೆ ಸಿಕ್ಕಿಬಿದ್ದ ಬಳಿಕ ಮೂವರು ನಡುವೆ ಹೊಡೆದಾಟವಾಗಿದೆ.

ಈ ವೇಳೆ ಮಹಿಳೆಯ ಪತಿ ಆಕೆಯ ಪ್ರಿಯಕರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ಪ್ರಿಯಕರ ಭಯಭೀತನಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ತನ್ನ ಪತ್ನಿಯನ್ನು ಮನವೊಲಿಸಲು ಯತ್ನಿಸುವ ವ್ಯಕ್ತಿಯೂ ಆಕೆಯನ್ನು ಬಲವಂತಪೂರ್ವಕವಾಗಿ ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಅಕ್ಟೋಬರ್​ 31ರಂದು ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈವರೆಗೆ 739.8 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ನೆಟ್ಟಿಗರು ವಿಡಿಯೋ ನೋಡಿ ತಮ್ಮಿಷ್ಟದ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net