ಕಂತೆ..ಕಂತೆ.. ಹಣವನ್ನು ಹೊತ್ತು ತರುತ್ತದೆ ಈ ಪಕ್ಷಿ; ವಿಡಿಯೋ ನೋಡಿ...

bird
Published on

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಚಾರಗಳು ಸುದ್ದಿಯಲ್ಲಿರುತ್ತವೆ. ವಿಚಿತ್ರವಾದ ವಿಡಿಯೋಗಳು ಜನರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲೊಂದು ಪಕ್ಷಿಯ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಪಕ್ಷಿಯೊಂದು(ನೋಡಲು ಕಾಗೆ ಅಂತೆ ಕಾಣುತ್ತಿದೆ) ಮನೆ ಒಳಗೆ ಹಾರಿ ಬಂದು ಮೇಜಿನ ಬಳಿ ಕುಳಿತಿರುವುದು ಕಂಡುಬರುತ್ತದೆ.   ನಂತರ ವೀಡಿಯೊ ಮಾಡುವ ವ್ಯಕ್ತಿಯು ಮೇಜಿನ ಕೆಳಗೆ ಡ್ರಾಯರ್ ಅನ್ನು ತೆರೆಯುತ್ತಾನೆ, ಅದರ ನಂತರ ಪಕ್ಷಿ  ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ಬಂದಿರುವ ಹಣವನ್ನು ಅಲ್ಲಿ ಹಾಕುತ್ತದೆ. ಅಚ್ಚರಿಯ ಸಂಗತಿ ಎಂದರೆ ಆ ಡ್ರಾಯರ್ ನಲ್ಲಿ ಈಗಾಗಲೇ ಸಾಕಷ್ಟು ಹಣ ಇಡಲಾಗಿದೆ. ಇಷ್ಟು ಹಣವನ್ನು ಕಾಗೆಯೇ ತಂದು ಒಟ್ಟುಗೆ ಹಾಕಿದೆ ಎನ್ನಲಾಗಿದೆ.

ಈ ವೀಡಿಯೊವನ್ನು  ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 23 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ.

ಈ ಕಾಗೆ ನಮಗೂ ಬೇಕು? ಎಲ್ಲಿ ಸಿಗುತ್ತದೆ ಈ ಪಕ್ಷಿ? ಹಣ ಹೀಗೂ ಸಂಪಾದನೆ ಮಾಡಬಹುದಾ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net