ಸ್ನೇಹಿತರಿಗಾಗಿ ಘಮ..ಘಮಿಸುವ ಬಿರಿಯಾನಿ ಸಿದ್ಧಪಡಿಸಿದ ಸ್ಟಾರ್ ಹೀರೋ; ವಿಡಿಯೋ ವೈರಲ್

blank

ಹೈದ್ರಾಬಾದ್​: ಟಾಲಿವುಡ್ ಸ್ಟಾರ್ ಹೀರೋ ಅಜಿತ್ ಕುಮಾರ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಆದರೆ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಅಜಿತ್‌ಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಸಮಯ ಸಿಕ್ಕಾಗಲೆಲ್ಲ ಬೈಕ್ ಟೂರ್ ಮಾಡುತ್ತಾರೆ. ಇತ್ತೀಚೆಗಷ್ಟೇ ಈ ಹೀರೋ ಬಿರಿಯಾನಿ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗಷ್ಟೇ ತನ್ನ ಸ್ನೇಹಿತರೊಂದಿಗೆ ಅರಣ್ಯ ಸವಾರಿಗೆ ತೆರಳಿದ್ದರು. ರಾತ್ರಿ ಊಟದ ವೇಳೆಗೆ ತನ್ನ ಗೆಳೆಯರಿಗೆ ರುಚಿಕರವಾದ ಬಿರಿಯಾನಿಯನ್ನೂ ತಯಾರಿಸಿ ಕೊಟ್ಟಿದ್ದಾರೆ.

ಅಜಿತ್ ಬಿರಿಯಾನಿ ಮಾಡುತ್ತಿದ್ದರೆ ಅವರ ಸ್ನೇಹಿತರು ಆ ಪರಿಮಳದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕೊನೆಗೆ ಅಜಿತ್ ರೆಡಿ ಮಾಡಿದ ಬಿರಿಯಾನಿ ನೋಡಿ.. ನೆಟ್ಟಿಗರೂ ಮೂಕವಿಸ್ಮಿತರಾಗಿದ್ದಾರೆ. ಮತ್ತು ಆ ಅಡುಗೆ ವಿಡಿಯೋ ನೋಡಿ.

ಈ ನಡುವೆ ಅಜಿತ್ ಸದ್ಯ ‘ವಿಡ ಮುಯಿರ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಗಿಜ್ ತಿರುಮೇನಿ ನಿರ್ದೇಶನದ ಈ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶೆಡ್ಯೂಲ್ ಮುಗಿಸಿರುವ ಈ ಚಿತ್ರ ಮುಂದಿನ ಶೆಡ್ಯೂಲ್ ಗಾಗಿ ವಿದೇಶಕ್ಕೆ ತೆರಳಲಿದೆ.

‘ಅಜರ್‌ಬೈಜಾನ್’ನಲ್ಲಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧವಾಗುತ್ತಿದೆ. ಈ ಶೂಟಿಂಗ್‌ಗೆ ಹೋಗುವ ಮುನ್ನ ಅಜಿತ್ ತಮ್ಮ ಸ್ನೇಹಿತರೊಂದಿಗೆ  ಟ್ರಿಪ್​​ ಹೋಗಿದ್ದಾರೆ ಎನ್ನಲಾಗಿದೆ.

ಮದುವೆಗೂ ಮುನ್ನ ಮುಖೇಶ್ ಅಂಬಾನಿಗೆ ಷರತ್ತು ಹಾಕಿಯೇ ವಿವಾಹ ಆಗಿದ್ದರು ನೀತಾ ಅಂಬಾನಿ!

ಯಮನಂತೆ ಬಂದ ಕೇಬಲ್ ವೈರ್: ಇಪ್ಪಾಡಿ ಆಸ್ಪತ್ರೆಯ ನರ್ಸ್ ದುರ್ಮರಣ

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…