More

  ಮದುವೆಗೂ ಮುನ್ನ ಮುಖೇಶ್ ಅಂಬಾನಿಗೆ ಷರತ್ತು ಹಾಕಿಯೇ ವಿವಾಹ ಆಗಿದ್ದರು ನೀತಾ ಅಂಬಾನಿ!

  ನವದೆಹಲಿ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದೇಶದ ಅತ್ಯಂತ ಶ್ರೀಮಂತ ದಂಪತಿ.   ಮುಖೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಅವರು ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಗೂ ಮುನ್ನ ಒಂದು ಷರತ್ತು ಹಾಕಿಯೆ ಮದುವೆಯಾಗಿದ್ದರು ಎನ್ನಲಾಗಿದೆ.

  ಮದುವೆಗೂ ಮುನ್ನ ನೀತಾ ಅಂಬಾನಿ ಹೆಸರು ನೀತಾ ದಲಾಲ್. ಶಾಲಾ ಶಿಕ್ಷಕರಷ್ಟೇ ಅಲ್ಲದೆ ಭರತನಾಟ್ಯ ನೃತ್ಯದಲ್ಲೂ ಮಿಂಚಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ ಅವರ ತಂದೆ ಧೀರೂಭಾಯಿ ಅಂಬಾನಿ ಮತ್ತು ತಾಯಿ ಕೋಕಿಲಾಬೆನ್ ಅಂಬಾನಿ ನೀತಾ ಅವರ ಭರತನಾಟ್ಯ ನೃತ್ಯ ಪ್ರದರ್ಶನಕ್ಕೆ ಮನಸೋತರು. ನಂತರ ಧೀರೂಭಾಯಿ ಅಂಬಾನಿ ಅವರು ತಮ್ಮ ಹಿರಿಯ ಮಗ ಮುಖೇಶ್ ಅಂಬಾನಿಗೆ ಮದುವೆಯ ಪ್ರಸ್ತಾಪವನ್ನು ಮಾಡಲು ನೀತಾ ಅವರ ತಂದೆಗೆ ಕರೆ ಮಾಡಿದರು. ನಂತರ ಮುಖೇಶ್ ಅಂಬಾನಿ ಜತೆಗಿನ ಮದುವೆಯ ಪ್ರಸ್ತಾಪ ಅವರ ಕುಟುಂಬಕ್ಕೆ ಹೋದಾಗ ನೀತಾ ಹಾಗೂ  ಅವರ ಕುಟುಂಬಸ್ಥರು ಶಾಕ್ ಆಗಿದ್ದಾರೆ.  ದೇಶದ ಪ್ರಮುಖ ಕೈಗಾರಿಕೋದ್ಯಮಿಯೊಬ್ಬರ ಕುಟುಂಬಕ್ಕೆ ಮಗಳ ಮದುವೆ ಪ್ರಸ್ತಾಪ ಬಂದಿದ್ದು, ನೀತಾ ಅವರ ತಂದೆಗೆ ಆಘಾತವಾಗಿದೆ. ಈ ಪ್ರಸ್ತಾಪದ ಬಗ್ಗೆ ನೀತಾ ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದ್ದರು.

  ಮುಖೇಶ್ ಅಂಬಾನಿ ಅವರ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡರು. ಆದರೆ ಅದಕ್ಕೆ ಒಪ್ಪುವ ಮುನ್ನ ನೀತಾ ಅವರು ಮುಖೇಶ್ ಅಂಬಾನಿಗೆ ಷರತ್ತನ್ನು ಹಾಕಿದ್ದರು. ಆ ಷರತ್ತಿಗೆ ಮುಖೇಶ್ ಅಂಬಾನಿ ಒಪ್ಪಿದ್ದು ನೀತಾ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.

  ಈ ಹಿಂದೆಸಂದರ್ಶನದಲ್ಲಿ ನೀತಾ ಅವರೇ ಈ  ಬಗ್ಗೆ ತಿಳಿಸಿದ್ದಾರೆ. ಮದುವೆಯ ನಂತರ ಶಿಕ್ಷಕಿಯಾಗಿ ಕೆಲಸ ಮಾಡಲು ಬಯಸುವುದಾಗಿ ನೀತಾ ಮುಖೇಶ್‌ಗೆ ಹೇಳುತ್ತಾಳೆ. ಅದಕ್ಕೆ ಮುಖೇಶ್ ಒಪ್ಪಿ ನೀತಾ ಮದುವೆಯಾದಳು.

  ನೀತಾ ಹೆಚ್ಚು ಕಾಲ ಶಿಕ್ಷಕಿಯಾಗಿ ಕೆಲಸ ಮಾಡದಿದ್ದರು. ನಂತರ ನೀತಾ ಅಂಬಾನಿ ಮುಂಬೈನಲ್ಲಿ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಸ್ಥಾಪಿಸಿದರು. ಮದುವೆಯಾದ ನಂತರ ತಿಂಗಳಿಗೆ 800 ರೂಪಾಯಿ ಸಂಬಳದಲ್ಲಿ ಶಿಕ್ಷಕಿ ಕೆಲಸಕ್ಕೆ ಸೇರಿದ್ದರು. ಆದರೆ ಈಗ ಆಕೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಪತ್ನಿ.

  ತೂಕ ಇಳಿಸಿಕೊಳ್ಳಲು ಅನಂತ್ ಅಂಬಾನಿ ಏನು ತಿನ್ನುತ್ತಾರೆ ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts