More

  ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

  ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್‌ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಅನ್ನೋ ವದಂತಿಗಳು ಆಗಾಗ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇವರಿಬ್ಬರದು ಹಿಟ್ ಜೋಡಿ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು, ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಕೂಡ.

  ಇದನ್ನೂ ಓದಿ: ಬಾಲಕಿ ದತ್ತು ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು

  ಅದೇ ಇಂಥ ಗಾಸಿಪ್‌ಗಳಿಗೆ ಕಾರಣವೇ? ಗೊತ್ತಿಲ್ಲ. ಈಚೆಗೂ ಕೂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇದೇ ವರ್ಷ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ವಿಜಯ್ ದೇವರಕೊಂಡ ಖಡಕ್ ರಿಪ್ಲೈ ಕೂಡ ನೀಡಿದ್ದರು. ಈಗ ಮತ್ತೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಬಗೆಗಿನ ಸುದ್ದಿ ವೈರಲ್​ ಆಗುತ್ತಿದೆ.

  Rashmika Vijay

  ಏಪ್ರಿಲ್ 5 ಅಂದರೆ ಶುಕ್ರವಾರ ರಶ್ಮಿಕಾ ಹುಟ್ಟುಹಬ್ಬ. ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಬುದಾಬಿಗೆ ಹೋಗುವುದಾಗಿ ಮೊನ್ನೆಯಷ್ಟೇ ಘೋಷಿಸಿದ್ದ ನಟಿ ಅಲ್ಲಿದ್ದ ಎಲ್ಲಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿಯಾಗಿ ಪೋಸ್ಟ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬರ್ತಡೆಗೆ ತನ್ನ ಗೆಳೆಯ ವಿಜಯ್​ ದೇವರಕೊಂಡ ದುಬಾರಿ ಬೆಲೆಯ ಗಿಫ್ಟ್​ ನೀಡಿದ್ದಾರೆ. ನೀವು ಊಹೆಗೆ ಮೀರಿ ರಶ್ಮಿಕಾ ಬರ್ತ್​ಡೇ ದಿನ ವಿಜಯ್ ಅವರು 50 ಕೋಟಿಯ ಗಿಫ್ಟ್ ನೀಡಿದ್ದಾರೆ.

  'ನ್ಯಾಷನಲ್ ಕ್ರಶ್' ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

  ವಿಜಯ್ ದೇವರಕೊಂಡ ಅಭಿನಯಿಸಿದ ಫ್ಯಾಮಿಲಿ ಸ್ಟಾರ್ ಸಿನಿಮಾ ರಶ್ಮಿಕಾ ಬರ್ತ್​ಡೇ ದಿನವೇ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ 50 ಕೋಟಿ ಬಜೆಟ್ ಹಾಕಲಾಗಿದೆ ಎನ್ನಲಾಗಿದೆ. ಇದು ವಿಜಯ್ ಅವರ ಸಿನಿಮಾ ಅಲ್ಲವಾದರೂ ಅವರ ಬಹುನಿರೀಕ್ಷಿತ ಚಿತ್ರವಾಗಿರುವುದರಿಂದ ಅದನ್ನು ಗರ್ಲ್​ಫ್ರೆಂಡ್ ಬರ್ತ್​ಡೇ ದಿನ ರಿಲೀಸ್ ಮಾಡುವ ಮೂಲಕ ಸ್ವೀಟ್ ಗಿಫ್ಟ್ ಕೊಡುತ್ತಿದ್ದಾರೆ.

  ನಟ ನವಿಲಿನ ಚಿತ್ರವನ್ನು ತೆಗೆದುಕೊಂಡು ಅದನ್ನು ಸ್ಟೋರಿಯಾಗಿ ಹಂಚಿಕೊಂಡಿದ್ದಾರೆ. ಅಂತೂ ರಶ್ಮಿಕಾ-ವಿಜಯ್ ಜೊತೆಗಿದ್ದದ್ದು ಇಲ್ಲಿ ಕೂಡಾ ಪ್ರೂವ್ ಆಗಿದೆ. ವಿಜಯ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಫ್ಯಾಮಿಲಿ ಸ್ಟಾರ್ ನಟಿಯ ಜನ್ಮದಿನದಂದೇ ಬಿಡುಗಡೆಯಾಗುತ್ತಿದೆ. ನಟಿ ಶೀಘ್ರದಲ್ಲೇ ಯುಎಇಗೆ ಹೋಗಲಿದ್ದಾರೆ ಎಂಬ ವರದಿಗಳು ಈ ಹಿಂದೆ ಇದ್ದವು. ಇದಾದ ಬಳಿಕ ವಿಜಯ್ ದೇವರಕೊಂಡ ಕೂಡ ಅಬುಧಾಬಿಗೆ ಆಗಮಿಸಿದ್ದು, ಇವರಿಬ್ಬರು ಜೊತೆಯಾಗಿದ್ದಾರೆ ಎಂಬುದಕ್ಕೆ ಇದೀಗ ಅಭಿಮಾನಿಗಳಿಗೆ ಪುರಾವೆ ಸಿಕ್ಕಿದೆ.

  'ನ್ಯಾಷನಲ್ ಕ್ರಶ್' ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

  ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರ ‘ದಿ ಫ್ಯಾಮಿಲಿ ಸ್ಟಾರ್’ USA ನಲ್ಲಿ 500 ಪರದೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದಿದ್ದು, ಇದು ಅವರ ವೃತ್ತಿಜೀವನದಲ್ಲಿ ಅವರ ಅತಿದೊಡ್ಡ ಬಿಡುಗಡೆಯಾಗಿದೆ. ಅವರು ಏಪ್ರಿಲ್ 4 ರಂದು USA ನಲ್ಲಿ ಚಿತ್ರದ ಪ್ರಥಮ ಪ್ರದರ್ಶನವನ್ನು ಘೋಷಿಸಿದರು.

  'ನ್ಯಾಷನಲ್ ಕ್ರಶ್' ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

  ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಎಂಬ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ, ಇಬ್ಬರು ಸಾರ್ವಜನಿಕವಾಗಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.
  ಆದರೆ, ರಶ್ಮಿಕಾ ಅಥವಾ ವಿಜಯ್ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಅವರು ‘ಬೆಸ್ಟ್ ಫ್ರೆಂಡ್ಸ್ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ‘ಲೈಗರ್’ ನಟ ಈ ವದಂತಿಯನ್ನು ತಳ್ಳಿಹಾಕಿದ್ದರು.

  ಲೋಕಸಭೆ ಚುನಾವಣೆ: ಅಮೇಥಿಯಿಂದ ರಾಬರ್ಟ್ ವಾದ್ರಾ ಸ್ಪರ್ಧೆ ಬಹುತೇಕ ಖಚಿತ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts