

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ದಿಗ್ಬಂಧನದಲ್ಲಿರುವ ಹಾಲಿ-ಮಾಜಿ ಕ್ರಿಕೆಟಿಗರು ವಿವಿಧ ರೀತಿಯಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ತಮ್ಮ ಕನಸಿನ ವಿಶ್ವ, ಎದುರಾಳಿ, ಸಮಕಾಲೀನ ಇಲೆವೆನ್‌ಗಳ ರಚನೆಯ ಮೂಲಕವೂ ಕ್ರಿಕೆಟ್ ಜತೆಗಿನ ನಂಟು ಕಾಯ್ದುಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾರೆ. ವಿವಿಧ ಕ್ರಿಕೆಟಿಗರು ಈ ರೀತಿ ಆಯ್ಕೆ ಮಾಡಿದ ತಂಡಗಳ ಕುತೂಹಲಕಾರಿ ವಿವರ ಇಲ್ಲಿದೆ.
ಗಂಭೀರ್ ಟೆಸ್ಟ್ ತಂಡಕ್ಕೆ ಕುಂಬ್ಳೆ ಕ್ಯಾಪ್ಟನ್
ಮಾಜಿ ಆರಂಭಿಕ ಗೌತಮ್ ಗಂಭೀರ್ ತಮ್ಮ ಆಯ್ಕೆಯ ಭಾರತದ ಟೆಸ್ಟ್ ತಂಡವನ್ನು ರಚಿಸಿದ್ದು, ಸ್ಪಿನ್ ದಿಗ್ಗಜ ಹಾಗೂ ಅನಿಲ್ ಕುಂಬ್ಳೆ ಅವರನ್ನು ಅದಕ್ಕೆ ನಾಯಕರನ್ನಾಗಿ ನೇಮಿಸಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್ ಈ ತಂಡದಲ್ಲಿರುವ ಮತ್ತೋರ್ವ ಕನ್ನಡಿಗ. ಹಲವು ಭಿನ್ನಾಭಿಪ್ರಾಯಗಳ ನಡುವೆ ಧೋನಿ ಅವರನ್ನು ತಂಡದ ವಿಕೆಟ್ ಕೀಪರ್ ಆಗಿ ಹೆಸರಿಸಿದ್ದಾರೆ.
ಗಂಭೀರ್ ಟೆಸ್ಟ್ ಇಲೆವೆನ್: ಸುನೀಲ್ ಗಾವಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂಎಸ್ ಧೋನಿ (ವಿ.ಕೀ), ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ (ನಾಯಕ), ಜಹೀರ್ ಖಾನ್, ಜಾವಗಲ್ ಶ್ರೀನಾಥ್.
ಇದನ್ನೂ ಓದಿ: ಕ್ರೀಡಾ ಕ್ಷೇತ್ರದಲ್ಲೂ ಮುತ್ತಪ್ಪ ರೈ ಸೈ…
ಹಸ್ಸೆ ಎದುರಾಳಿ ಇಲೆವೆನ್‌ನಲ್ಲಿ ಸಚಿನ್, ಕೊಹ್ಲಿ
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮೈಕೆಲ್ ಹಸ್ಸೆ ತಮ್ಮೆದುರು ಆಡಿರುವ ಅತ್ಯುತ್ತಮ ಆಟಗಾರರ ತಂಡವನ್ನು ರಚಿಸಿದ್ದು, ಭಾರತೀಯರಾದ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅವರನ್ನೂ ಹೆಸರಿಸಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಧೋನಿ ಜತೆಗೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಸ್ಪರ್ಧೆಯಲ್ಲಿದ್ದರೂ, ಅಂತಿಮವಾಗಿ ಶ್ರೀಲಂಕಾದ ಕುಮಾರ ಸಂಗಕ್ಕರಗೆ ಸ್ಥಾನ ನೀಡಿರುವೆ ಎಂದಿದ್ದಾರೆ. ಹಸ್ಸೆಯ ಅತ್ಯುತ್ತಮ ಎದುರಾಳಿ ಇಲೆವೆನ್: ವೀರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್, ಬ್ರಿಯಾನ್ ಲಾರಾ, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಜಾಕ್ಸ್ ಕಾಲಿಸ್, ಕುಮಾರ ಸಂಗಕ್ಕರ, ಡೇಲ್ ಸ್ಟೈನ್, ಮಾರ್ನ್ ಮಾರ್ಕೆಲ್, ಜೇಮ್ಸ್ ಆಂಡರ್‌ಸನ್, ಮುತ್ತಯ್ಯ ಮುರಳೀಧರನ್.
ಇದನ್ನೂ ಓದಿ: ಸುರೇಶ್ ರೈನಾ ಪುತ್ರಿ ಯೋಗಾಸನ ಪ್ರವೀಣೆ!
ಆಕಾಶ್ ಚೋಪ್ರಾ ರೆಟ್ರೋ ಟಿ20 ಇಲೆವೆನ್
ಮಾಜಿ ಆರಂಭಿಕ ಹಾಗೂ ವೀಕ್ಷಕವಿವರಣೆಕಾರ ಆಕಾಶ್ ಚೋಪ್ರಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಶುರುವಾಗುವುದಕ್ಕೆ ಮೊದಲೇ ನಿವೃತ್ತರಾಗಿರುವ ದಿಗ್ಗಜ ಆಟಗಾರರ ಅತ್ಯುತ್ತಮ ಟಿ20 ತಂಡವನ್ನು ರಚಿಸಿದ್ದಾರೆ. ಪಾಕ್ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಈ ತಂಡಕ್ಕೆ ನಾಯಕರಾಗಿದ್ದು, ವಿಂಡೀಸ್ ಆಟಗಾರರೇ ತಂಡದಲ್ಲಿ ಹೆಚ್ಚಿದ್ದಾರೆ. ಕಪಿಲ್ ದೇವ್ ತಂಡದಲ್ಲಿರುವ ಏಕೈಕ ಭಾರತೀಯ.
ಟಿ20 ರೆಟ್ರೋ ಇಲೆವೆನ್: ಗಾರ್ಡನ್ ಗ್ರೀನಿಜ್, ಬ್ಯಾರಿ ರಿಚರ್ಡ್ಸ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಕಪಿಲ್ ದೇವ್, ಇಮ್ರಾನ್ ಖಾನ್ (ನಾಯಕ), ಇಯಾನ್ ಬಾಥಂ, ಗ್ಯಾರಿ ಸೋಬರ್ಸ್, ಆಂಡಿ ್ಲವರ್ (ವಿ.ಕೀ), ವಾಸಿಂ ಅಕ್ರಂ, ಜೋಯೆಲ್ ಗಾರ್ನರ್.
ಸ್ಟೈನ್ ತಂಡದಲ್ಲಿ ಭಾರತೀಯರಿಲ್ಲ
ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈನ್ ತಮ್ಮ ಜತೆಗೆ ಅಥವಾ ವಿರುದ್ಧ ಆಡಿರುವ ಆಟಗಾರರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಇದರಲ್ಲಿ ಭಾರತದ ಯಾವ ಆಟಗಾರನೂ ಇಲ್ಲದಿರುವುದು ಅಚ್ಚರಿಯಾಗಿದೆ. ಜತೆಗೆ-ವಿರುದ್ಧ ಆಡಿರುವ ಅತ್ಯುತ್ತಮ ಇಲೆವೆನ್: ಕುಮಾರ ಸಂಗಕ್ಕರ, ಗ್ರೇಮ್ ಸ್ಮಿತ್, ಡೇವ್ ಹಾಕೆನ್, ಜಾಕ್ಸ್ ಕಾಲಿಸ್, ಜಾಂಟಿ ರೋಡ್ಸ್, ಕ್ವಿಂಟನ್ ಡಿಕಾಕ್, ಬ್ರೆಟ್ ಬರ್ಗಿಯಾಚಿ, ಪೀಟರ್ ಲಂಬರ್ಡ್, ಬ್ರೆಟ್ ಲೀ, ಪೌಲ್ ಹ್ಯಾರಿಸ್, ಅಲನ್ ಡೊನಾಲ್ಡ್.
ವಾರ್ನ್ ವಿಶ್ವ ಇಲೆವೆನ್‌ನಲ್ಲಿ ಸಚಿನ್, ವೀರೂ
ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಮ್ಮ ಸಮಕಾಲೀನ ಎದುರಾಳಿ ಆಟಗಾರರನ್ನು ಒಳಗೊಂಡ ವಿಶ್ವ ಇಲೆವೆನ್ ಏಕದಿನ ತಂಡವನ್ನು ರಚಿಸಿದ್ದು, ಸಚಿನ್ ಮತ್ತು ಸೆಹ್ವಾಗ್‌ಗೆ ಸ್ಥಾನ ಕಲ್ಪಿಸಿದ್ದಾರೆ. ವಾರ್ನ್ ವಿಶ್ವ ಇಲೆವೆನ್ ಏಕದಿನ ತಂಡ: ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಕೆವಿನ್ ಪೀಟರ್ಸೆನ್, ಕುಮಾರ ಸಂಗಕ್ಕರ (ವಿ.ಕೀ), ಆಂಡ್ರ್ಯೋ ಫ್ಲಿಂಟ್ಾ, ವಾಸಿಂ ಅಕ್ರಂ, ಡೇನಿಯಲ್ ವೆಟ್ಟೋರಿ, ಶೋಯಿಬ್ ಅಖ್ತರ್, ಕರ್ಟ್ಲಿ ಆಂಬ್ರೋಸ್.
ಇದನ್ನೂ ಓದಿ: ಅಂಜುಂಗೆ ಖೇಲ್ರತ್ನ, ಜಸ್ಪಾಲ್ಗೆ ದ್ರೋಣಾಚಾರ್ಯ?
ದಿನೇಶ್ ಕಾರ್ತಿಕ್ ಐಪಿಎಲ್ ಇಲೆವೆನ್
ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಅತ್ಯುತ್ತಮ ಐಪಿಎಲ್ ತಂಡವನ್ನು ಹೆಸರಿಸಿದ್ದು, ಎಂಎಸ್ ಧೋನಿಗೆ ಸ್ಥಾನ ಕಲ್ಪಿಸಿಲ್ಲ. ತಮ್ಮನ್ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಂಡಿರುವ ಕಾರ್ತಿಕ್, ರೋಹಿತ್ ಶರ್ಮರನ್ನು ನಾಯಕರನ್ನಾಗಿ ಹೆಸರಿಸಿದ್ದಾರೆ. ಸಾರ್ವಕಾಲಿಕ ಐಪಿಎಲ್ ಇಲೆವೆನ್: ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ (ನಾಯಕ), ದಿನೇಶ್ ಕಾರ್ತಿಕ್ (ವಿ.ಕೀ), ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ಗ್ಲೆನ್ ಮೆಕ್‌ಗ್ರಾಥ್, ಜಸ್‌ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್, ಯಜುವೇಂದ್ರ ಚಾಹಲ್.
ಜಾರ್ ಏಕದಿನ ತಂಡಕ್ಕೆ ಧೋನಿ ನಾಯಕ
ದೇಶೀಯ ಕ್ರಿಕೆಟ್ ದಿಗ್ಗಜ ವಾಸಿಂ ಜಾರ್ ತಮ್ಮ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡವನ್ನು ರಚಿಸಿದ್ದು, ಎಂಎಸ್ ಧೋನಿಗೆ ನಾಯಕತ್ವ ವಹಿಸಿದ್ದಾರೆ. ಸಾರ್ವಕಾಲಿಕ ಏಕದಿನ ತಂಡ: ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮ, ವಿವ್ ರಿಚರ್ಡ್ಸ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಎಂಎಸ್ ಧೋನಿ (ನಾಯಕ/ವಿ.ಕೀ), ವಾಸಿಂ ಅಕ್ರಂ, ಶೇನ್ ವಾರ್ನ್/ಸಕ್ಲೇನ್ ಮುಸ್ತಾಕ್, ಜೋಯೆಲ್ ಗಾರ್ನರ್, ಗ್ಲೆನ್ ಮೆಕ್‌ಗ್ರಾಥ್. 12ನೇ ಆಟಗಾರ: ರಿಕಿ ಪಾಂಟಿಂಗ್.
ಅಫ್ರಿದಿ ತಂಡದಲ್ಲಿ ಒಬ್ಬನೇ ಭಾರತೀಯ
ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ಆಯ್ಕೆಯ ಸರ್ವಾಕಾಲಿಕ ತಂಡವನ್ನು ಆಯ್ಕೆ ಮಾಡಿದ್ದು, ಸಚಿನ್ ತೆಂಡುಲ್ಕರ್ ತಂಡದಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಗಿಲ್‌ಕ್ರಿಸ್ಟ್ ತಂಡದಲ್ಲಿದ್ದರೂ, ರಶೀದ್ ಲತ್ೀಗೆ ವಿಕೆಟ್ ಕೀಪಿಂಗ್ ಒಪ್ಪಿಸಿರುವುದು ಅಚ್ಚರಿಯಾಗಿದೆ. ಸಾರ್ವಕಾಲಿಕ ಇಲೆವೆನ್: ಸಯೀದ್ ಅನ್ವರ್, ಆಡಂ ಗಿಲ್‌ಕ್ರಿಸ್ಟ್, ರಿಕಿ ಪಾಂಟಿಂಗ್, ಸಚಿನ್ ತೆಂಡುಲ್ಕರ್, ಇಂಜಮಾಮ್ ಉಲ್ ಹಕ್, ಜಾಕ್ಸ್ ಕಾಲಿಸ್, ರಶೀದ್ ಲತ್ೀ (ವಿ.ಕೀ), ವಾಸಿಂ ಅಕ್ರಂ, ಶೇನ್ ವಾರ್ನ್, ಗ್ಲೆನ್ ಮೆಕ್‌ಗ್ರಾಥ್, ಶೋಯಿಬ್ ಅಖ್ತರ್.
ಕರ್ನಾಟಕ ಇಲೆವೆನ್ ಆರಿಸಿದ ಸುನೀಲ್ ಜೋಶಿ
ಮಾಜಿ ಸ್ಪಿನ್ನರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ತಮ್ಮ ಜತೆಗೆ ಮತ್ತು ತಮಗಿಂತ ಮುನ್ನ ರಣಜಿ ಕ್ರಿಕೆಟ್ ಆಡಿದ 2 ಪ್ರತ್ಯೇಕ ಕರ್ನಾಟಕ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಗತ ದಿನಗಳ ಕರ್ನಾಟಕ ಇಲೆವೆನ್: ಇಎಎಸ್ ಪ್ರಸನ್ನ (ನಾಯಕ), ಜಿಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್ (ಉಪನಾಯಕ), ಬಿಎಸ್ ಚಂದ್ರಶೇಖರ್, ಪಿಆರ್ ಅಶೋಕಾನಂದ್, ಸಯ್ಯದ್ ಕಿರ್ಮಾನಿ (ವಿ.ಕೀ), ವಿಜಯ್ ಕೃಷ್ಣ, ಎವಿ ಜಯಪ್ರಕಾಶ್, ರೋಜರ್ ಬಿನ್ನಿ, ವಿಎಸ್ ವಿಜಯ್‌ಕುಮಾರ್, ಎಸ್. ವಿಶ್ವನಾಥ್; 12ನೇ ಆಟಗಾರ: ರಘುರಾಮ್ ಭಟ್. ಸಮಕಾಲೀಕ ಕರ್ನಾಟಕ ಇಲೆವೆನ್: ಅನಿಲ್ ಕುಂಬ್ಳೆ (ನಾಯಕ), ರಾಹುಲ್ ದ್ರಾವಿಡ್ (ಉಪನಾಯಕ), ವಿಜಯ್ ಭಾರಧ್ವಾಜ್, ಜೆ. ಅರುಣ್ ಕುಮಾರ್, ಅವಿನಾಶ್ ವೈದ್ಯ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ಆರ್. ಅನಂತ್, ಕೆ. ಜಸ್ವಂತ್.
ವಾರ್ನರ್ ಇಂಡೋ-ಆಸೀಸ್ ಐಪಿಎಲ್ ಇಲೆವೆನ್
ಸನ್‌ರೈಸರ್ಸ್ ಹೈದರಾಬಾದ್ ನಾಯಕರಾಗಿರುವ ಆಸೀಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಭಾರತ-ಆಸೀಸ್ ಆಟಗಾರರನ್ನು ಮಾತ್ರ ಒಳಗೊಂಡ ಸರ್ವಾಕಾಲಿಕ ಐಪಿಎಲ್ ಇಲೆವೆನ್ ಪ್ರಕಟಿಸಿದ್ದಾರೆ. ಐಪಿಎಲ್ ಇಲೆವೆನ್: ರೋಹಿತ್ ಶರ್ಮ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಗ್ಲೆನ್ ಮ್ಯಾಕ್ಸ್‌ವೆಲ್, ಎಂಎಸ್ ಧೋನಿ (ವಿ.ಕೀ), ಮಿಚೆಲ್ ಸ್ಟಾರ್ಕ್, ಜಸ್‌ಪ್ರೀತ್ ಬುಮ್ರಾ, ಆಶಿಶ್ ನೆಹ್ರಾ, ಕುಲದೀಪ್ ಯಾದವ್/ಯಜುವೇಂದ್ರ ಚಾಹಲ್.
ದಿಲ್ಶಾನ್ ತಂಡದಲ್ಲಿ ಸಚಿನ್‌ಗೆ ಸ್ಥಾನ
ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ತಮ್ಮ ವೃತ್ತಿಜೀವನದಲ್ಲಿ ಜತೆಯಾಗಿ ಮತ್ತು ವಿರುದ್ಧ ಆಡಿದ ಆಟಗಾರರ ಏಕದಿನ ತಂಡವನ್ನು ಪ್ರಕಟಿಸಿದ್ದು, ಸಚಿನ್ ತೆಂಡುಲ್ಕರ್ ಇದರಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯರಾಗಿದ್ದಾರೆ. ಏಕದಿನ ತಂಡ: ಸನತ್ ಜಯಸೂರ್ಯ, ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಮಹೇಲ ಜಯವರ್ಧನೆ, ರಿಕಿ ಪಾಂಟಿಂಗ್ (ನಾಯಕ), ಜಾಕ್ಸ್ ಕಾಲಿಸ್, ಎಬಿ ಡಿವಿಲಿಯರ್ಸ್ (ವಿ.ಕೀ), ವಾಸಿಂ ಅಕ್ರಮ್, ಕರ್ಟ್ನಿ ವಾಲ್ಶ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್. 12ನೇ ಆಟಗಾರ: ಗ್ಲೆನ್ ಮೆಕ್‌ಗ್ರಾಥ್.
ಇದನ್ನೂ ಓದಿ: ಆರೂವರೆ ವರ್ಷದಿಂದ ಲಾಕ್ಡೌನ್ನಲ್ಲಿರುವೆ!
ಬ್ರಾಡ್ ಹಾಗ್ ಐಪಿಎಲ್ ಇಲೆವೆನ್‌ನಲ್ಲಿ ಧೋನಿ, ಪಂತ್
ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಸಾರ್ವಕಾಲಿಕ ಐಪಿಎಲ್ ಇಲೆವೆನ್ ತಂಡವನ್ನು ಪ್ರಕಟಿಸಿದ್ದು, ಎಂಎಸ್ ಧೋನಿ ಮತ್ತು ರಿಷಭ್ ಪಂತ್ ಇಬ್ಬರಿಗೂ ಸ್ಥಾನ ಕಲ್ಪಿಸಿರುವುದು ಅಚ್ಚರಿಯಾಗಿದೆ. ಆದರೆ ಧೋನಿ ಕೀಪಿಂಗ್ ಜವಾಬ್ದಾರಿ ಒಪ್ಪಿಸಿದ್ದು, ರಿಷಭ್ ಪಂತ್‌ರನ್ನು ಬ್ಯಾಟ್ಸ್‌ಮನ್ ಆಗಿ ಉಳಿಸಿಕೊಂಡಿದ್ದಾರೆ. ಸುರೇಶ್ ರೈನಾಗೆ ಸ್ಥಾನ ನೀಡದಿರುವುದು ಮತ್ತೊಂದು ಅಚ್ಚರಿಯಾಗಿದೆ. ಸಾರ್ವಕಾಲಿಕ ಐಪಿಎಲ್ ಇಲೆವೆನ್: ರೋಹಿತ್ ಶರ್ಮ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್, ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ (ವಿ.ಕೀ), ಸುನೀಲ್ ನಾರಾಯಣ್, ರಶೀದ್ ಖಾನ್, ಮುನ್ಾ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ.