

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಪಂಜದ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಿಯಲ್ಲಿ ಹನುಮಾನ್ ಹಂಟರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಲ್ಲೋಡಿಯ ಉಳ್ಳಾಕುಲು ಕಲಾರಂಗ ದ್ವಿತೀಯ, ಕೂತ್ಕುಂಜದ ಅಟಲ್-ಜೀ ಫ್ರೆಂಡ್ಸ್ ತೃತೀಯ ಹಾಗೂ ಬಳ್ಪ ಫ್ರೆಂಡ್ಸ್ ಕ್ಲಬ್ ಚತುರ್ಥ ಸ್ಥಾನ ಪಡೆಯಿತು.
ಮಿಥುನ್ ಹೇಮಳಗೆ ಉತ್ತಮ ಕ್ಷೇತ್ರ ರಕ್ಷಕ, ಹೈದರ್ ಬೆಳ್ಳಾರೆ ಉತ್ತಮ ಬ್ಯಾಟರ್, ಸವದ್ ಪಂಜಿಕಲ್ಲು ಮ್ಯಾನ್ ಆಫ್ ಮ್ಯಾಚ್ ಫೈನಲ್ ಹಾಗೂ ಉತ್ತಮ ಬೌಲರ್, ಎಮರ್ಜಿಂಗ್ ಪ್ಲೇಯರ್ ಆಫ್ ದ ಟೂರ್ನಮೆಂಟ್ ಹಿತೇಶ್ ನಿಂತಿಕಲ್ಲು, ಗೇಮ್ ಚೇಂಜರ್ ಆಫ್ ದಿ ಟೂರ್ನಮೆಂಟ್ ಸತೀಶ್ ಕೆರೆಯಡ್ಕ, ಉತ್ತಮ ಕೀಪರ್ ಲಿತಿನ್ ಕಂದಡ್ಕ, ಲೆಜೆಂಡ್ ಪ್ಲೇಯರ್ ಯತೀಂದ್ರ ಸುಳ್ಯ, ಮ್ಯಾನ್ ಆಫ್ ದಿ ಸೀರಿಸ್ ಕಾರ್ತಿಕ್ ಹರಿಹರ ವೈಯಕ್ತಿಕ ಬಹುಮಾನ ಪಡೆದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಬಹುಮಾನ ವಿತರಿಸಿದರು. ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಗಂಗಾಧರ ಗೌಡ, ಜಿತೇಂದ್ರ ಗೌಡ, ರಾಧಾಕೃಷ್ಣ ಗೌಡ, ಪವನ್ ಪಲ್ಲತ್ತಡ್ಕ, ಜನಾದರ್ನ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಶಶಿದಾಸ್, ನವೀನ್ ನಾಗತೀರ್ಥ, ಸತೀಶ್ ಕೆರೆಯಡ್ಕ ಇದ್ದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.