More

    ದೋಚುತ್ತಾರೆ ಕರೀನಾ, ಟಬು, ಕೃತಿ: ದುಬಾರಿಯಾಯ್ತು ‘ಕಾಮಿಕ್ ಕ್ಯಾಪ್ರ್ ಕ್ರ್ಯೂ’ ಟಿಕೆಟ್​..!

    ಮುಂಬೈ: ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕಾಮಿಕ್ ಕ್ಯಾಪ್ರ್ ಕ್ರ್ಯೂ’ ಮಾರ್ಚ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಮಹಿಳಾ ಪ್ರಧಾನವಾದ ಈ ಚಿತ್ರದ ವೀಕ್ಷಣೆಗೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದು, ಮುಂಗಡ ಟಿಕೆಟ್‌ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ವಿಶೇಷವೆಂದರೆ ಮುಂಬೈನಲ್ಲಿ ದುಬಾರಿ ಬೆಲೆಯ ಟಿಕೆಟ್‌ ಖರೀದಿಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

    ಇದನ್ನೂ ಓದಿ: 2 ವರ್ಷದ ಪುಟಾಣಿಯ ಅದ್ಭುತ ಸಾಧನೆ: 17,598 ಅಡಿ ಎತ್ತರದ ಶಿಖರವೇರಿ ತ್ರಿವರ್ಣ ಧ್ವಜ ಹಾರಿಸಿಯೇಬಿಟ್ಟಿತು..

    ಬುಕ್ ಮೈ ಶೋನ ಅಧಿಕೃತ ವೆಬ್‌ಸೈಟ್ ಪ್ರಕಾರ, ಅತ್ಯಧಿಕ ಬೆಲೆಯ 1,150 ರೂ.ನ ಟಿಕೆಟ್​ಗಳು ಬಹುತೇಕ ಮಾರಾಟವಾಗಿವೆ. ಇದು ಎಷ್ಟರ ಮಟ್ಟಿಗೆ ಎಂದರೆ ವರ್ಲಿಯ ಆಟ್ರಿಯಾ ಮಾಲ್‌ನಲ್ಲಿರುವ ಐನಾಕ್ಸ್, ಇನ್‌ಸಿಗ್ನಿಯಾದಲ್ಲಿ ರಾತ್ರಿ 9:30 ರ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

    ತೆರಿಗೆ ಮತ್ತು ಬುಕಿಂಗ್ ಶುಲ್ಕದಲ್ಲಿ ಲೆಕ್ಕ ಹಾಕಿದರೆ ಟಿಕೆಟ್ ದರ 1,220 ರೂ. ಆಗುತ್ತದೆ. ಆದರೆ ಥಿಯೇಟರ್ ಅನುಭವಕ್ಕಾಗಿ ತಂಪು ಪಾನೀಯ ಮತ್ತು ಪಾಪ್‌ಕಾರ್ನ್ ಅನ್ನು ಸೇರಿಸಿದರೆ 2,070 ರೂ.ತೆರಬೇಕಾಗುತ್ತದೆ.

    ಕರೀನಾ, ಟಬು ಮತ್ತು ಕೃತಿ ‘ಕ್ರ್ಯೂ’ನ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಇವರ ಜೊತೆಗೆ ಕಪಿಲ್ ಶರ್ಮಾ, ದಿಲ್ಜಿತ್ ದೋಸಾಂಜ್ ಕೂಡ ನಟಿಸಿದ್ದಾರೆ. ಚಿತ್ರವನ್ನು ರಾಜೇಶ್ ಎ ಕೃಷ್ಣನ್ ನಿರ್ದೇಶಿಸಿದ್ದು, ರಿಯಾ ಕಪೂರ್ ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದರು. ಇದು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು.

    ಕ್ರ್ಯೂ ಬಗ್ಗೆ ಉತ್ಸುಕರಾದ ಕರೀನಾ, “ಈ ಚಿತ್ರವು ಓಶಿಯನ್ ಎಂಟು, ಓಷಿಯನ್ಸ್ ಇಲೆವೆನ್ ಸ್ಪೇಸ್‌ನಲ್ಲಿನ ಸಂಪೂರ್ಣ ಮಹಿಳಾ ನಾಯಕತ್ವದ ದರೋಡೆ ಮತ್ತು ಹಾಸ್ಯ ಭರಿತದ್ದಾಗಿದೆ. ನೀವು ಯಾವಾಗಲೂ ಪುರುಷರು ದರೋಡೆ ಮಾಡುವುದನ್ನು ನೋಡಿದ್ದೀರಿ, ಆದರೆ ಇದರಲ್ಲಿ ಸ್ತ್ರೀಯರು ದರೋಡೆ ಮಾಡಲು ಸಿದ್ಧರಿದ್ದೇವೆ ಎಂಬುದನ್ನು ತೋರಿಸುತ್ತದೆ.

    ಮಹಿಳೆಯರು ಕಾಮಿಕ್ ಪಾತ್ರಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಚಿತ್ರ ತೋರಿಸುತ್ತದೆ ಎಂದು ಕೃತಿ ಹೇಳಿದ್ದಾರೆ. “ನಾವು ಹೆಚ್ಚಾಗಿ ಪುರುಷರೊಂದಿಗೆ ಕೆಲಸ ಮಾಡುತ್ತೇವೆ. ಆದರೆ ಈ ಚಿತ್ರದಲ್ಲಿ ಮಹಿಳೆಯರೊಂದಿಗೆ ಕೆಲಸ ಮಾಡುವುದು ತುಂಬಾ ಉಲ್ಲಾಸದಾಯಕವಾಗಿದೆ ಎಂದು ಅವರು ಹೇಳಿದರು.

    ಹೀರೋ ಸಿದ್ಧಾರ್ಥ್ ಜೊತೆ ಗುಟ್ಟಾಗಿ 3ನೇ ಮದುವೆಯಾದ ಸ್ಟಾರ್ ಹೀರೋಯಿನ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts