ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸಾಧನೆ

sa
Published on

ಕಾರ್ಕಳ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ ಬಿ ಆರ್ಕ್ ಮತ್ತು ಜೆಇಇ ಬಿ ಪ್ಲಾನಿಂಗ್‌ನ ಫಲಿತಾಂಶ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಈ ವರ್ಷವೂ ಅತ್ಯುನ್ನತ ಫಲಿತಾಂಶ ಪಡೆದುಕೊಂಡಿದೆ.

ಬಿ ಆರ್ಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ತೇಜಸ್ ವಿ.ನಾಯಕ್ 99.4223451 ಪರ್ಸಂಟೈಲ್, ಸಾಚಿ ಶಿವಕುಮಾರ್ ಕಡಿ 99.3362631 ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ.

ಬಿ ಪ್ಲಾನಿಂಗ್ ಫಲಿತಾಂಶದಲ್ಲಿ ತೇಜಸ್ ವಿ.ನಾಯಕ್ 99.5751775 ಪರ್ಸಂಟೈಲ್ ಗಳಿಸಿದ್ದಾರೆ. ಒಟ್ಟು ಫಲಿತಾಂಶದಲ್ಲಿ 99 ಪರ್ಸಂಟೈಲಿಗಿಂತ ಅಧಿಕ 2 ವಿದ್ಯಾರ್ಥಿಗಳು, 97ರಿಂದ ಅಧಿಕ 3 ವಿದ್ಯಾರ್ಥಿಗಳು, 95ಕ್ಕಿಂತ ಅಧಿಕ 8 ಹಾಗೂ 16 ವಿದ್ಯಾರ್ಥಿಗಳು 90 ಪರ್ಸಂಟೈಲಿಗಿಂತ ಅಧಿಕ ಫಲಿತಾಂಶ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಬೋಧಕ ಬೋಧಕೇತರ ವೃಂದದವರು ಹಾಗೂ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಸಂಯೋಜಕ ಸುಮಂತ್ ದಾಮ್ಲೆ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net