ಇಸ್ರೋವಿನಿಂದ ಉಪಗ್ರಹಗಳ ಉಪಯುಕ್ತ ವಿವರ

gan-1
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಮಾನವ ನಿರ್ಮಿತ ಉಪಕರಣವನ್ನು ಕೃತಕ ಉಪಗ್ರಹಗಳ ಮೂಲಕ ಅಂತರಿಕ್ಷದಲ್ಲಿ ಬಿಟ್ಟು ಭೂಮಿ ಮೇಲಿನ ಮನುಷ್ಯರಿಗೆ ಬೇಕಾಗುವ ಎಲ್ಲ ಸೇವೆಗಳನ್ನು ಇಸ್ರೋ ಸಂಸ್ಥೆ ನೀಡುತ್ತಿದೆ. ಇಂಟರ್‌ನೆಟ್ ಸೌಲಭ್ಯ, ಜಿಪಿಎಸ್, ಲೋಕೇಶನ್ ಸರ್ಚ್, ಹವಾಮಾನ ವರದಿಯಂಥ ಮಾಹಿತಿಗಳನ್ನು ಆ ಉಪಗ್ರಹದಲ್ಲಿ ಅಳವಡಿಸಿದ ವಾಹಕಗಳಿಂದ ಪಡೆಯಲಾಗುತ್ತಿದೆ ಎಂದು ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯುಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್.ಮೂರ್ತಿ ಹೇಳಿದರು.

ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಶ್ರಯದಲ್ಲಿ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಸಿ ಸ್ಕೂಲ್ ವಠಾರದಲ್ಲಿ ಆಯೋಜಿಸಲಾದ ಬೆಂಗಳೂರಿನ ಇಸ್ರೋ ಪ್ರಾಯೋಜಿತ ಎರಡು ದಿನಗಳ ಸ್ಪೇಸ್ ಆನ್ ವೀಲ್ಸ್ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಿಯೋ ಸ್ಯಾಟಲೈಟ್ಸ್ ಸದಾ ತಿರುಗುತ್ತಾ ಚಲಿಸುತ್ತಾ ಇರುವ ಉಪಗ್ರಹ. ಮಂಗಳಯಾನ, ಚಂದ್ರಯಾನದ ಬಳಿಕ ಚಂದ್ರಯಾನ-4 ಸಿದ್ಧತೆಗಳು ನಡೆಯುತ್ತಿವೆ ಎಂದರು.

ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ದುರ್ಗಾಪರಮೇಶ್ವರಿ ಎಜುಕೇಶನಲ್ ಟ್ರಸ್ಟ್ ಚೇರ್ಮನ್ ಡಾ.ಜಯರಾಮ ಶೆಟ್ಟಿ ಎಸ್. ಶುಭಾಶಂಸನೆಗೈದರು. ಶಾಲೆಯ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಎಚ್. ಉಪಸ್ಥಿತರಿದ್ದರು. ಪ್ರಾಂಶುಪಾಲ ನಿತಿನ್ ಡಿ.ಅಲ್ಮೇಡಾ ಸ್ವಾಗತಿಸಿದರು. ರೋಹಿಣಿ ಅತಿಥಿಗಳನ್ನು ಪರಿಚಯಿಸಿದರು. ನಂದಿನಿ ಆಚಾರ್ಯ ವಂದಿಸಿದರು. ಸುಷ್ಮಾ ಆರ್. ಕಾರ್ಯಕ್ರಮ ನಿರೂಪಿಸಿದರು.

ವಿಜ್ಞಾನಿಗಳಿಂದ ಮಾಹಿತಿ

ಆಕಾಶಕಾಯಗಳ ಮಾಹಿತಿಯನ್ನೊಳಗೊಂಡ ಮಾದರಿಗಳ ಬಸ್ಸನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಆಕಾಶಕಾಯಗಳ ಮಾಹಿತಿಯೊಂದಿಗೆ ಇಸ್ರೋ ಸಂಸ್ಥೆಯ ಕಾರ್ಯವೈಖರಿ, ಬಾಹ್ಯಾಕಾಶ ವಿಜ್ಞಾನ ಹಾಗೂ ಇಸ್ರೋ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಮಾಹಿತಿ ನೀಡಿದರು. ಕುಂದಾಪುರ ಮತ್ತು ಬ್ರಹ್ಮಾವರ ವಲಯದ ವಿವಿಧ ಶಾಲೆಗಳ 6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾನವ ಬಾಹ್ಯಾಕಾಶ ಕಾರ್ಯಕ್ರಮದಡಿ ಗಗನಯಾತ್ರಿಯನ್ನು ಆಕಾಶಕ್ಕೆ ಮುಂದಿನ ವರ್ಷ ಕಳುಹಿಸಲಾಗುತ್ತಿದೆ. ರೋಬಾಟನ್ನು ಚಂದ್ರನಲ್ಲಿ ಕಳುಹಿಸಿ ಮೇಲ್ಮೈಯಲ್ಲಿ ಪ್ರಯೋಗ ನಡೆಸಿ ಚಂದ್ರನ ಮೇಲಿನಿಂದ ವಸ್ತುವನ್ನು ಸಂಗ್ರಹಿಸಿ ಭೂಮಿಗೆ ತರುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇಸ್ರೋ ಸಂಸ್ಥೆಯ ಮತ್ತೊಂದು ಮಹತ್ವದ ಯೋಜನೆ ಭಾರತೀಯ ಅಂತರಿಕ್ಷ ಸ್ಟೇಶನನ್ನು 2047ರೊಳಗೆ ಕಾರ್ಯಗತಗೊಳಿಸಲು ಸಿದ್ಧತೆ ನಡೆಯುತ್ತಿದೆ. ಪಿ.ವಿ.ಎನ್.ಮೂರ್ತಿ -ಇಸ್ರೋ ವಿಶುವಲ್ ಡಾಕ್ಯುಮೆಂಟೇಶನ್ ಘಟಕ  ಮುಖ್ಯಸ್ಥರು https://www.vijayavani.net/rathbeedi-school-students-sheltering-in-anganwadi-verandah-theatre https://www.vijayavani.net/night-light-cricket-tournament

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net